ಇಂದು (ಮಾ. 27) ವಿಜೃಂಭಣೆಯ ವಿಶೇಷ ಉತ್ಸವ
ಕಾರ್ಕಳ : ನೆಲ್ಲಿಕಾರು ಅತಿಶಯ ಶ್ರೀ ಕ್ಷೇತ್ರ 1008 ಭಗವಾನ್ ಶ್ರೀ ಅನಂತನಾಥ ಸ್ವಾಮಿ, ಶ್ರೀ ಬ್ರಹ್ಮಯಕ್ಷ ದೇವರ ಬಸದಿಯಲ್ಲಿ ಮಾ. 27ರಂದು ಗುಡ್ಜಿ ನೇಮೋತ್ಸವ ನಡೆಯಲಿದೆ. ಶ್ರೀ ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಮತ್ತು ಪರಿವಾರ ದೈವಗಳ ಗುಡ್ಜಿ ನೇಮೋತ್ಸವ ಸಂಜೆ 6 ಗಂಟೆಯಿಂದ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಸದಿ ಆಡಳಿತ ಸಮಿತಿ ಮನವಿ ಮಾಡಿಕೊಂಡಿದೆ.
48 ವರ್ಷಗಳ ಅನಂತರ ನೆಲ್ಲಿಕಾರು ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿರುವ ಗುಡ್ಜಿ ನೇಮೋತ್ಸವ ನ್ಯೂಸ್ ಕಾರ್ಕಳದಲ್ಲಿ ನೇರಪ್ರಸಾರಗೊಳ್ಳಲಿದೆ.






















