ಸರ್ಫೇಸಿ ಕಾಯ್ದೆ- 2002

ಪ್ರತಿಯೊಂದು ದೇಶದ ಆರ್ಥಿಕತೆಯು ಪ್ರಮುಖವಾಗಿ ಆಯಾ ದೇಶದ ಹಣಕಾಸು ಉದ್ಯಮದ ಪ್ರಗತಿಯ ಮೇಲೆ ಅವಲಂಭಿಸಿರುತ್ತದೆ. ಈ ನಿಟ್ಟಿನಲ್ಲಿ ವಾಣಿಜ್ಯ ಅಥವಾ ವಾಸ್ತವ್ಯ ಉದ್ದೇಶಗಳಿಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೀಡಿದ ಸಾಲವನ್ನು ಕ್ಲಪ್ತ ಸಮಯದಲ್ಲಿ ವಸೂಲು ಮಾಡುವಲ್ಲಿ ವಿಫಲತೆಯನ್ನು ಕಂಡಾಗ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಷ್ಟವನ್ನು ಹೊಂದಿ ಅದು ಕೇವಲ ಬ್ಯಾಂಕ್‌ನ ಹಣಕಾಸು ಉದ್ಯಮಕ್ಕೆ ಮಾರಕವಾಗುವುದು ಮಾತ್ರವಲ್ಲದೇ ಇದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಸಹ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ನೀಡುವ ಸಾಲದ ಮೊತ್ತವನ್ನು ಸುರಕ್ಷಿತವಾಗಿ ವಸೂಲು ಮಾಡುವ ಕಾರ್ಯ ವಿಧಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ಸಂಬಂಧಪಟ್ಟ ಸಾಲಗಾರರು ಬ್ಯಾಂಕಿನಿಂದ ಅಥವಾ ಹಣಕಾಸು ಸಂಸ್ಥೆಯಿಂದ ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಸಾಲವನ್ನು ಪಡೆದ ನಂತರ ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾದ ಸಂಧರ್ಭದಲ್ಲಿ ಸಾಲ ವಸೂಲಾತಿಯ ಕ್ರಮವಾಗಿ ಸಾಲಗಾರರು ಸಾಲದ ಭಧ್ರತೆಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ಅಡವಿರಿಸಿದ ವಸತಿ ಅಥವಾ ವಾಣಿಜ್ಯ ಕಟ್ಟಡ ಅಥವಾ ಆಸ್ತಿಯನ್ನು ಕಡಿಮೆ ವೆಚ್ಚ ಮತ್ತು ನಿಯಮಿತ ಅವಧಿಯೊಳಗಾಗಿ ಕಾನೂನಿನ ನಿಯಮಾನುಸಾರವಾಗಿ ಮುಟ್ಟುಗೋಲು ಮಾಡಿ ಸ್ವಾಧೀನ ಪಡೆದು ನಂತರ ಸಾರ್ವಜನಿಕವಾಗಿ ಹರಾಜು ಮಾಡಲು ಅವಕಾಶವನ್ನು ಬ್ಯಾಂಕಿಗೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಸರ್ಫೇಸಿ ಕಾಯ್ದೆ’ 2002 (ಹಣಕಾಸು ಆಸ್ತಿಗಳ ಸೆಕ್ಯುರಿಟೈಸೇಶನ್ ಮತ್ತು ಪುನರ್‌ನಿರ್ಮಾಣ ಮತ್ತು ಭದ್ರತಾ ಬಡ್ಡಿ ಜಾರಿ ಕಾಯ್ದೆ) ಎಂಬ ಕಾನೂನನ್ನು ನಮ್ಮ ದೇಶದಲ್ಲಿ ಜಾರಿಗೆ ತಂದಿರುತ್ತದೆ.

ಈ ಕಾನೂನಿನ ಪ್ರಕಾರ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯವರು ತಮ್ಮ ಗ್ರಾಹಕರಿಗೆ ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುವ ಸಾಲದ ವಸೂಲಾತಿಗಾಗಿ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಇದರಿಂದಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಯ ವಿಷಯದಲ್ಲಿ ಶಕ್ತಿಶಾಲಿಗಳಾಗಿ ತಮ್ಮ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬಹುದಾಗಿದೆ. ಮಾತ್ರವಲ್ಲದೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಕಾನೂನಿನ ಚೌಕಟ್ಟಿನ ಒಳಗೆ ತಾವು ಗ್ರಾಹಕರಿಗೆ ನೀಡುವ ಸಾಲದ ವಹಿವಾಟನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದೆ. ಒಟ್ಟಾರೆಯಾಗಿ ದೇಶದಾದ್ಯಂತ ಹಣಕಾಸು ಸ್ವತ್ತುಗಳ ಪುನರ್ ನಿರ್ಮಾಣ ಅಥವಾ ಭದ್ರತೆಯ ನಿಯಂತ್ರಣ ಮತ್ತು ಭದ್ರತಾ ಹಿತಾಸಕ್ತಿಯನ್ನು ಜಾರಿಗೊಳಿಸುವ ಹಾಗೂ ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಗ್ರಾಹಕರ ಅಂದರೆ ಠೇವಣಿದಾರರ ಮತ್ತು ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸುವುದು ಈ ಕಾನೂನಿನ ಪ್ರಾಥಮಿಕ ಉದ್ದೇಶವಾಗಿರುತ್ತದೆ.

































































































error: Content is protected !!
Scroll to Top