ಕೋಳಿ ಹಣದ ವಿಚಾರದಲ್ಲಿ ಹಲ್ಲೆ – ಜಾತಿ ನಿಂದನೆ

ಕಾರ್ಕಳ : ಕೋಳಿ ಹಣದ ವಿಚಾರವಾಗಿ ಜಗಳ ನಡೆದು ಜಾತಿ ನಿಂದನೆ, ಹಲ್ಲೆ, ದೂರು ಪ್ರತಿದೂರು ದಾಖಲಾದ ಘಟನೆ ಅಜೆಕಾರು ಪೊಲೀಸ್‌ ಠಾಣಾ ವ್ಯಾಪ್ತಿಯ ಮುಟ್ಲುಪ್ಪಾಡಿ ಎಂಬಲ್ಲಿ ನಡೆದಿದೆ. ಮಾ. 26ರಂದು ಅಂಡಾರು ಗ್ರಾಮದ ಪದ್ಮ ಅವರು ಅಜೆಕಾರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಮುಟ್ಲುಪಾಡಿ ನಿವಾಸಿ ಸುದರ್ಶನ ಶೆಟ್ಟಿಯವರ ಬಳಿ ತಾನು ಕೋಳಿ ಸಾಕಾಣಿಕೆ ಹಾಗೂ ತೋಟದ ಕೆಲಸ ಮಾಡಿಕೊಂಡಿದ್ದು ಗುರುವಾರ ರಾತ್ರಿ 8 ಗಂಟೆಗೆ ಸುದರ್ಶನ ಶೆಟ್ಟಿಯವರ ತೋಟದಲ್ಲಿದ್ದ ಕೋಳಿಗಳನ್ನು ಗೂಡಿಗೆ ಹಾಕುತ್ತಿದ್ದಾಗ ಒಂದು ಆಲ್ಟೋ, ಬಿಳಿ ಬಣ್ಣದ ಕಾರು ಮತ್ತು 4 ಬೈಕ್‌ಗಳಲ್ಲಿ ಹರೀಶ, ಸುಧೀರ, ದುರ್ಗಾ, ಗುರುದೀಶ ಮತ್ತು ಪ್ರತಾಪ ಸೇರಿದಂತೆ ಸುಮಾರು 15 ಜನ ಬಂದು ಸುದರ್ಶನ ಅವರಿಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಹೋಗಿರುವ ತನಗೆ ಹಾಗೂ ಆಕಾಶ್‌ನನ್ನು ಹರೀಶ್ ದೂಡಿ ಹಲ್ಲೆ ಮಾಡಿದಲ್ಲದೇ ಜಾತಿ ನಿಂದನೆ ಮಾಡಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡಿರುವ ಪದ್ಮ ಹಾಗೂ ಸುದರ್ಶನ ಶೆಟ್ಟಿಯವರು ಚಿಕಿತ್ಸೆಗಾಗಿ ಹೆಬ್ರಿ ತಾಲೂಕು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಸುದರ್ಶನ್‌ ಅವರಿಗೆ ಹರೀಶ್‌ ಕೋಳಿಯ ಹಣ ಕೊಡಲು ಬಾಕಿಯಿದ್ದು ಇದೇ ಕಾರಣವಾಗಿ ಈ ಕೃತ್ಯ ನಡೆದಿದೆ ಎಂದು ಉಲ್ಲೇಖಿಸಿದ್ದಾರೆ.

ಪ್ರತಿದೂರು
ಶುಕ್ರವಾರ ಸುಜಯ್‌ ಎಂಬವರು ಅಜೆಕಾರು ಠಾಣೆಗೆ ದೂರು ನೀಡಿದ್ದು, ತಾನು ಮಹೇಶ್ ಅವರೊಂದಿಗೆ ಮುಟ್ಲಪಾಡಿಯಲ್ಲಿನ ಸುದರ್ಶನ್‌ ಅವರ ಕೋಳಿ ಅಂಗಡಿಗೆ ಕೋಳಿ ಖರೀದಿಸಲು ಹೋಗಿದ್ದು, ಈ ಸಂದರ್ಭ ಹರೀಶ್ ಪೂಜಾರಿಯವರು ಸುದರ್ಶನನಿಂದ ಬರಬೇಕಾಗಿದ್ದ 12,000 ರೂ. ಹಣವನ್ನು ಪಡೆದುಕೊಳ್ಳಲು ಬಂದಿದ್ದರು. ಈ ವಿಚಾರವಾಗಿ ಅವರಿಬ್ಬರ ನಡುವೆ ಚರ್ಚೆ ನಡೆಯುತ್ತಿದ್ದಾಗ ಸುಜಯ್‌ ಅವರು ಸುದರ್ಶನ್‌ನಲ್ಲಿ ಏನು ವಿಷಯ ? ಎಂದು ಕೇಳಿದಾಗ ನಿನಗೆ ಏಕೆ ? ಎಂದು ಜಾತಿ ನಿಂದನೆ ಮಾಡಿರುವುದಲ್ಲದೇ ಅಲ್ಲಿಯೇ ಇದ್ದ ಸುಮಾರು 7 ಮಂದಿ ತನಗೆ, ಮಹೇಶ ಹಾಗೂ ಹರೀಶ ಪೂಜಾರಿಯವರಿಗೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಇನ್ನೊಮ್ಮೆ ಹಣ ಕೇಳಿದರೆ ನಿಮ್ಮನ್ನು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಿರುತ್ತಾರೆ.

































































































error: Content is protected !!
Scroll to Top