ಸ್ವಚ್ಚ ಬಜಗೋಳಿ ಬ್ರಿಗೇಡ್ – ಮುಡಾರು ಪಂಚಾಯತ್ ಕಾರ್ಯವೈಖರಿ
ಕಾರ್ಕಳ : ಕಡಾರಿ ನದಿ ತಟದಲ್ಲಿ ಕೂದಲು ರಾಶಿ ಹಾಕಿದವರಿಗೆ ದಂಡ ವಿಧಿಸಿ ಅವರಿಂದಲೇ ವಿಲೇವಾರಿ ಮಾಡಿರುವ ಘಟನೆ ವರದಿಯಾಗಿದೆ.
ಸ್ವಚ್ಚ ಬಜಗೋಳಿ ಬ್ರಿಗೇಡ್ ತಂಡ ಮಾ. 15ರಂದು ಕಡಾರಿ ನದಿ ಸಮೀಪದಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಸಂದರ್ಭದಲ್ಲಿ ನದಿ ತೀರದ ಬಂಡೆಯ ಮೇಲೆ ಕೂದಲಿನ ರಾಶಿ ಕಂಡು ಬಂದಿತ್ತು. ಅಲ್ಲಿ ದೊರೆತ ಮಾಹಿತಿಯಂತೆ ಕೂದಲನ್ನು ತಂದು ಹಾಕಿದ ತಂಡವನ್ನು ಪತ್ತೆ ಹಚ್ಚಿದ ಸ್ವಚ್ಚ ಬ್ರಿಗೇಡ್ ತಂಡವು ಮುಡಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಎಸ್‌ಎಲ್‌ಆರ್‌ಎಂ ಘಟಕದವರ ಸಹಾಯದಿಂದ ಅವರನ್ನು ಪಂಚಾಯತ್‌ಗೆ ಕರೆಯಿಸಿ ಅವರಿಂದ ದಂಡ ವಸೂಲು ಮಾಡಿ ಅವರಿಂದಲೇ ಆ ಕೂದಲನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ. ತಂಡದ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.



















