ಅಧಿಕಾರ ದುರುಪಯೋಗಪಡಿಸಿಕೊಳ್ಳದೆ ಸಮಾಜಮುಖಿಯಾಗಿ ತೊಡಗಿಕೊಂಡಾಗ ಯಶಸ್ಸು ಖಚಿತ – ಡಾ. ದಿಶಾ ದಿವಾಕರ್‌

ಕಾರ್ಕಳ : ಪ್ರಸ್ತುತ ಮಹಿಳೆಯರು ವಿಜ್ಞಾನ, ಕ್ರೀಡೆ, ಆರೋಗ್ಯ, ರಾಜಕೀಯ, ಉದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮೆರೆಯುತ್ತಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ದಾರ್ಶನಿಕರ ಮಾತು ಸತ್ಯ. ಆದರೆ, ಅಧಿಕಾರ ಸಿಕ್ಕಿತೆಂತು ಅದನ್ನು ದುರುಪಯೋಗ ಮಾಡದೆ, ಸಮಾಜಮುಖಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಿಶಾ ದಿವಾಕರ ಅಭಿಪ್ರಾಯಪಟ್ಟರು.
ಅವರು ಲಯನ್ಸ್‌ ಸಿಟಿ ವತಿಯಿಂದ ಇತ್ತೀಚೆಗೆ ಲಕ್ಷ್ಮೀ ಸಿಲ್ಕ್ಸ್‌ ಸಭಾಂಗಣದಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆಯನ್ನುದ್ಧೇಶಿಸಿ ಮಾತನಾಡಿದರು.

ಸನ್ಮಾನ
ಸಾವಯವ ತರಕಾರಿ ವ್ಯಾಪಾರಸ್ಥೆ ನಂದನ, ಮಹಿಳಾ ಪೋಸ್ಟ್‌ ಮ್ಯಾನ್‌ ಸುಚಿತ್ರಾ ಮತ್ತು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಕಾರ್ಕಳ ತಾಲೂಕು ಅಧ್ಯಕ್ಷೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಿಶಾ ದಿವಾಕರ್‌ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಅಧ್ಯಕ್ಷ ಗೋಪಾಲ್‌ ಅಂಚನ್‌, ಕಾರ್ಯದರ್ಶಿ ನಿಹಾಲ್‌ ಶೆಟ್ಟಿ ಜಕ್ಕನ್ಮಕ್ಕಿ, ಕೋಶಾಧಿಕಾರಿ ಶಾಲಿನಿ ಸುವರ್ಣ, ಬಿಒಡಿ ಸದಸ್ಯರಾದ ಟಿ. ಕೆ. ರಘುವೀರ್‌, ಯೋಗೇಶ್‌ ನಾಯಕ್‌, ನಯನ ನಾಯಕ್‌, ವೀಣಾ ಶೆಟ್ಟಿ, ಜಯಂತಿ ಶೆಟ್ಟಿ, ಸಂಧ್ಯಾ ಜಗದೀಶ್‌ ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್‌ ಕಾರ್ಯಕ್ರಮ ನಿರ್ವಹಿಸಿದರು.





























































































error: Content is protected !!
Scroll to Top