ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಕಳ ವಲಯದ ವತಿಯಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ದಿ. ಜಯಕರ ಸುವರ್ಣ ಸ್ಮರಣಾರ್ಥ (ಆಶಾ ಸ್ಟುಡಿಯೋ ಬಜಗೋಳಿ) ಮಾ. 22ರಂದು ಬಜಗೋಳಿ ಸಭಾಭವನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ಚರ್ಮರೋಗ, ಹೃದಯ, ಮೂಳೆ, ಕಣ್ಣಿನ ಪರೀಕ್ಷೆ, ಒಬಿಜಿ (ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ), ಈ.ಎನ್.ಟಿ (ಕಿವಿ, ಮೂಗು, ಗಂಟಲು) ತಪಾಸಣೆ, ರಕ್ತದಾನ ನಡೆಯಲಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಸಂತೋಷ್ ಶೆಟ್ಟಿ (98453 21172), ಮೀರಾ ಬಜಗೋಳಿ (7892475038) ಹಾಗೂ ಪ್ರಶಾಂತ್ ಕೆರ್ವಾಶೆ (9980752152) ಅವರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.















































