ಕುಕ್ಕುಂದೂರುವಿನ 2 ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯ

ಕಾರ್ಕಳ : ಕುಕ್ಕುಂದೂರುವಿನ ಮೇಲ್ಜಡ್ಡುವಿನಲ್ಲಿ ಗುಲಾಬಿ ಮೂಲ್ಯ ಹಾಗೂ ಜಯಂತಿ ಆಚಾರ್ಯ ಎಂಬವರು ಕಳೆದ 35 ವರ್ಷಗಳಿಂದ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ಇನ್ನು ಕೂಡ ಹಕ್ಕು ಪತ್ರ ದೊರೆತಿಲ್ಲ. ಈ ಎರಡು ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಕುಲಾಲ ಸಂಘ ಹಾಗೂ ವಿಶ್ವಕರ್ಮ ಸಮುದಾಯದವರು ಒತ್ತಾಯಿಸಿದ್ದಾರೆ.

ಮಾ. 13ರಂದು ಮನೆಗೆ ಭೇಟಿ ನೀಡಿದ ನಾನಿಲ್ತಾರ್ ಕುಲಾಲ ಸಂಘ, ಕಾರ್ಕಳ ಕುಲಾಲ ಸಂಘ ಹಾಗೂ ಹೊಸ್ಮಾರು ಕುಲಾಲ ಸಂಘದ ಸದಸ್ಯರು ಎರಡು ಮನೆಯ ಪರಿಸ್ಥಿತಿ ಹಾಗೂ ಸಮಸ್ಯೆಯನ್ನು ಪರಿಶೀಲಿಸಿ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇನ್ನು ಸ್ಥಳೀಯ ವ್ಯಕ್ತಿಯೋರ್ವರು ಈ ಎರಡು ಕುಟಂಬಗಳಿಗೆ ಮನೆ ತೆರವುಗೊಳಿಸುವಂತೆ ಬಲವಂತ ಮಾಡಿರುವ ಹಿನ್ನೆಲೆಯಲ್ಲಿ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಪೊಲೀಸ್ ಇಲಾಖೆಗೂ ಮನವಿ ಮಾಡಿದ್ದಾರೆ.

ನಾನಿಲ್ತಾರ್ ಕುಲಾಲ ಸಂಘದ ಮಾಜಿ ಅಧ್ಯಕ್ಷ ಕುಶ ಮೂಲ್ಯ, ಕುಲಾಲ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್, ಮಾಜಿ ಅಧ್ಯಕ್ಷ ಭೋಜ ಕುಲಾಲ್, ಜಯರಾಮ್ ಬಂಗೇರ ಕೆರ್ವಾಶೆ, ಪ್ರಮೋದ್ ಕುಲಾಲ್ ಹೊಸ್ಮಾರು, ಜಗನ್ನಾಥ ಕುಲಾಲ್ ಬೆಳ್ಮಣ್ ವಿಠಲ್ ಕುಲಾಲ್ ಬೇಲಾಡಿ, ಬೊಗ್ಗು ಮೂಲ್ಯ ಬೇಲಾಡಿ, ರಮೇಶ್ ಮಾಳ, ಜ್ಯೋತಿ ಕುಲಾಲ್ ಪದವು, ಜ್ಯೋತಿ ಬಾರಡಿ, ಗೋಪಾಲ ಮೂಲ್ಯ, ಸಂತೋಷ್‌ ಕುಲಾಲ್ ಪದವು, ಚಂದ್ರ ಮೂಲ್ಯ ರಾಜೇಶ್ ಕುಲಾಲ ಸಾಂತೂರ್, ಚಿತ್ರೀಶ್ ಕುಲಾಲ್ ಇನ್ನಾ, ನಿಲೇಶ್ ಕುಲಾಲ, ಪ್ರೇಮ್ ಕುಲಾಲ್, ರಾಜೇಶ್ ಕುಲಾಲ್ ಇನ್ನಾ, ನಾಗೇಶ್ ಕುಲಾಲ್ ಬೆಳ್ಮಣ್, ವಿಕಾಸ್ ಕುಲಾಲ್, ಶಶಿಧರ್ ಕುಲಾಲ್ ಕೆರ್ವಾಶೆ, ಸುರೇಶ್ ಕುಲಾಲ್ ಪಾಲಾಜೆ, ದೇವಪ್ಪ ಕುಲಾಲ್ ನಿಟ್ಟೆ, ಶಂಕರ್ ಕುಲಾಲ್ ಗುರ್ಬೇಟ್ಟು, ಸುರೇಂದ್ರ ಕುಲಾಲ್, ದಿವಾಕರ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವಕರ್ಮ ಸಮುದಾಯದವರಿಂದ ಮನೆ ಭೇಟಿ
ಮಾ. 14ರಂದು ಕಾರ್ಕಳ ವಿಶ್ವಕರ್ಮ ಸಮುದಾಯದವರು ಭೇಟಿ ನೀಡಿ ಎರಡು ಕುಟುಂಬದೊಂದಿಗೆ ಮಾತನಾಡಿ ಹಕ್ಕುಪತ್ರ ಸಮಸ್ಯೆಯ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ, ಜೊತೆ ಮೊಕ್ತೇಸರ ಪಿ. ರವಿ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಕಾರ್ಕಳ ತಾಲೂಕು ಅಧ್ಯಕ್ಷ ರಮೇಶ್‌ ಆಚಾರ್ಯ, ವಿಶ್ವಕರ್ಮ ಅಸೋಸಿಯೇಶನ್‌ ಅಧ್ಯಕ್ಷ ಸುಧಾಕರ್‌ ಆಚಾರ್ಯ, ನಿವೃತ್ತ ಪ್ರಾಂಶುಪಾಲ ವಸಂತ ಆಚಾರ್ಯ, ಸತೀಶ್‌ ಆಚಾರ್ಯ ದಾನಶಾಲೆ, ಕಟ್ಟೆಮಾರ್‌ ರತ್ನಾಕರ್‌ ಆಚಾರ್ಯ, ಭಜನಾ ಸಮಿತಿ ಅಧ್ಯಕ್ಷ ದಿನೇಶ್‌ ಆಚಾರ್ಯ, ಗ್ರಾ. ಪಂ. ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್‌, ಮಾಜಿ ಸದಸ್ಯ ಕರುಣಾಕರ್‌ ಕೋಟ್ಯಾನ್‌ ಹಾಗೂ ವಿಶ್ವಕರ್ಮ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.



































error: Content is protected !!
Scroll to Top