ವಾಹನಗಳ ವೇಗಕ್ಕಿನ್ನು ಕಡಿವಾಣ – ಕಾರ್ಕಳ ತಾಲೂಕಿನಲ್ಲೂ ಸ್ಪೀಡ್ ರಾಡರ್ ಗನ್ ಅಳವಡಿಕೆ

ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ವಾಹನಗಳ ವೇಗದ ಮಿತಿ ಮೀರುತ್ತಿದೆ. ಪರಿಣಾಮವಾಗಿ ಅಪಘಾತಗಳ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಇನ್ನು ವಾಹನ ಸವಾರರ ವೇಗಕ್ಕೆ ಪಾದಚಾರಿಗಳು ಸಾವನಪ್ಪುತ್ತಿರುವ ಘಟನೆಗಳನ್ನು ನೋಡುತ್ತಿದ್ದೇವೆ. ಆದರೆ ಇದೀಗ ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸ್‌ ಇಲಾಖೆ ದೂಪದಕಟ್ಟೆಯಲ್ಲಿ ಸ್ಪೀಡ್ ರಾಡರ್ ಗನ್ ಅಳವಡಿಸಿದೆ.

ಕಾರ್ಕಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾರ್ಕಳ-ಪಡುಬಿದಿರೆ ರಾಜ್ಯ ಹೆದ್ದಾರಿ ನಿಟ್ಟೆಯ ರಾಜ್ಯ ಹೆದ್ದಾರಿಯಲ್ಲಿ ಎಐ ಆಧಾರಿತ ಕ್ಯಾಮೆರಾ ಒಳಗೊಂಡ ಈ ನೂತನ ತಂತ್ರಜ್ಞಾನವನ್ನು ಅಳವಡಿಸಿದ್ದು, ಈ ಮೂಲಕ ವಾಹನಗಳ ಓವರ್‌ ಸ್ಪೀಡ್‌ ಸೇರಿದಂತೆ ಸಂಚಾತ ನಿಯಮ ಉಲ್ಲಂಘನೆ ಬ್ರೇಕ್‌ ಹಾಕುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದು ವಾಹನಗಳ ಸುಮಾರು ಒಂದು ಕಿ. ಮೀ. ದೂರದಿಂದ ವಾಹನಗಳನ್ನು ಕ್ಯಾಪ್ಚರ್‌ ಮಾಡುತ್ತದೆ. ಸಂಚಾರ ನಿಯಮ ಉಲ್ಲಂಘನೆಯಾದಲ್ಲಿ ಅಂತಹ ವಾಹನದ ಫೋಟೋ, ವೀಡಿಯೋ ಸೆರೆ ಹಿಡಿದು ವಾಹನ ಮಾಲಕರಿಗೆ ನೋಟೀಸ್‌ ಕಳುಹಿಸುತ್ತದೆ.

ಈಗಾಗಲೇ ದೂಪದಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ತಂತ್ರಜ್ಞಾನದ ಅಳವಡಿಕೆ ಇನ್ನೇನು ಎರಡು ದಿನದಲ್ಲಿ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ಕಾಪು, ಪಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸ್ಪೀಡ್ ರಾಡರ್ ಗನ್ ಕಾರ್ಯಪ್ರವೃತ್ತವಾಗಿದೆ.





































error: Content is protected !!
Scroll to Top