ಮಾ.‌14 : ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾರ್ಕಳ : ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮಾ. 14 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ‌ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿಳಿಸಿದರು. ಅವರು ಈ ಬಗ್ಗೆ ಮಾ.12 ರಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕೆಂಪು ಕಲ್ಲು, ಮರಳು ಸಾಗಾಟಕ್ಕೆ ಸರಿಯಾದ ನೀತಿ ಇಲ್ಲದೆ ಪೂರೈಕೆಯಲ್ಲಿ ವ್ಯತ್ಯಯ, ದುಡಿಯುವ ವರ್ಗಕ್ಕೆ ಕೆಲಸವಿಲ್ಲದೆ ಬದುಕು ದುಸ್ತರ, ಈ ಸ್ವತ್ತು, 9/11 ಏಕವಿನ್ಯಾಸ ಅನುಮೋದನೆ ಸಮಸ್ಯೆ, ಅಕ್ರಮ ಸಕ್ರಮ ಅರ್ಜಿಗಳ ತಿರಸ್ಕಾರ, ಬಿಪಿಎಲ್‌ ಕಾರ್ಡ್‌ ಸಮಸ್ಯೆ, 94ಸಿ ಹಕ್ಕುಪತ್ರ ನೀಡುವಲ್ಲಿ ಅನಗತ್ಯ ವಿಳಂಬ, ಆಶ್ರಯ ಮನೆಗಳಿಗೆ ಮಂಜೂರಾತಿ ನೀಡದಿರುವುದು, ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ರದ್ಧತಿ, ಅಘೋಷಿತ ಲೋಡ್‌ ಶೆಡ್ಡಿಂಗ್‌, ನಿರಂತರ ವಿದ್ಯುತ್‌ ದರ ಏರಿಕೆ, ಕರಾವಳಿಯ ಪ್ರವಾಸೋದ್ಯಮ ಕಡೆಗಣನೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಜೆಟ್‌ನಲ್ಲಿ ಕರಾವಳಿಯ ನಿರ್ಲಕ್ಷ್ಯ, ಅನುದಾನವಿಲ್ಲ, ಯೋಜನೆಗಳ ಅನುಷ್ಠಾನವಿಲ್ಲ, ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳ ದಾಖಲು, SCP-TSP ಅನುದಾನದ ದುರ್ಬಳಕೆ, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಮತ್ತು ಭ್ರಷ್ಟಚಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದು, ಕಾಂಗ್ರೆಸ್‌ ಸರಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್,‌ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ,‌ ತಾಲೂಕು ಯುವಮೋರ್ಚ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಉಪಸ್ಥಿತರಿದ್ದರು.







































error: Content is protected !!
Scroll to Top