ತಾಲೂಕು ರೆಕಾರ್ಡ್‌ ರೂಮ್‌ನಲ್ಲಿ ಕಡತ ನಾಪತ್ತೆ – ಸಿಬ್ಬಂದಿ ವಿರುದ್ಧ ದೂರು ದಾಖಲು

ಕಾರ್ಕಳ : ತಾಲೂಕು ಕಚೇರಿಯ ರೆಕಾರ್ಡ್‌ ರೂಮ್‌ನಲ್ಲಿ (ಅಭಿಲೇಖಾಲಯ)ದ್ದ ಕಡತ ನಾಪತ್ತೆಯಾದ ಕುರಿತಾಗಿ ಸಿಬ್ಬಂದಿ ಶ್ರೀನಾಥ ಅವರ ವಿರುದ್ಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಾಥ ಅವರು ಕಾರ್ಕಳ ತಾಲೂಕು ಕಚೇರಿಯ ಸಹಾ ಅಭಿಲೇಖಾಲಯ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 2022-23ನೇ ಸಾಲಿನಲ್ಲಿ ಅಜೆಕಾರು ಹೋಬಳಿಯ ಎರ್ಲಪಾಡಿ ಗ್ರಾಮದ mr 03/10-11ರ ಕಡತದ ಪ್ರತಿಯನ್ನು ಅರ್ಜಿದಾರರಿಗೆ ಮಾಹಿತಿ ಹಕ್ಕಿನಡಿಯಲ್ಲಿ ನೀಡಿರುತ್ತಾರೆ. ಆದರೆ ಆ ಕಡತವು ಪ್ರಸುತ್ತ ಅಭಿಲೇಖಾಲಯದಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ಉಪತಹಶೀಲ್ದಾರ್‌ ಕೆ. ಹರಿಪ್ರಸಾದ ಅವರು ನೀಡಿದ ದೂರಿನಂತೆ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.





























































































error: Content is protected !!
Scroll to Top