ಭಾರತದಲ್ಲಿ Samsung Galaxy S26 Ultra ಲಾಂಚ್

Samsung ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Samsung Galaxy S26 Ultra ಅನ್ನು ಭಾರತದಲ್ಲಿ ಪರಿಚಯಿಸಿದೆ. ಕಂಪನಿಯ 2026ರ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಗ್ಯಾಲಕ್ಸಿ S26 ಸೀರಿಸ್​ ಘೋಷಿಸಿದೆ.

ಈ Ultra ಆವೃತ್ತಿಯು, ಉನ್ನತ ಮಟ್ಟದ ಕ್ಯಾಮೆರಾ, AI ವೈಶಿಷ್ಟ್ಯಗಳು ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆಯೊಂದಿಗೆ ತನ್ನ ಪ್ರೀಮಿಯಂ ಅಲ್ಟ್ರಾ ವಿನ್ಯಾಸವನ್ನೊಳಗೊಂಡಿದೆ.

ಪ್ರಮುಖ ವೈಶಿಷ್ಟ್ಯಗಳು
Samsung Galaxy S26 Ultra 3,120 × 1,440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.9-ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಹೊಸ ‘ಪ್ರೈವಸಿ ಡಿಸ್‌ಪ್ಲೇ’ ವೈಶಿಷ್ಟ್ಯವು 30 ಡಿಗ್ರಿಗಿಂತ ಹೆಚ್ಚು ಕೋನದಿಂದ ಪರದೆಯನ್ನು ನೋಡಲು ಅಸಾಧ್ಯವಾಗುವಂತೆ ಮಾಡುತ್ತದೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿತನ ಕಾಪಾಡಲು ಸಹಾಯಕ. ಇನ್ನು ಈ ಡಿಸ್‌ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಆರ್ಮರ್ 2 ನಿಂದ ರಕ್ಷಿಸಲಾಗಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, Samsung Galaxy S26 Ultra ಕಸ್ಟಮೈಸ್ ಮಾಡಲಾದ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 16GB RAM ಮತ್ತು 1TB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಈ ಫೋನ್ One UI 8.5 ಆಧಾರಿತ Android 16 ಮೇಲೆ ಕಾರ್ಯನಿರ್ವಹಿಸುತ್ತದೆ. ನಿರೀಕ್ಷೆಯಂತೆಯೇ, ಮಲ್ಟಿಟಾಸ್ಕಿಂಗ್, ಗೇಮಿಂಗ್ ಹಾಗೂ ಎಐ ಆಧಾರಿತ ಕಾರ್ಯಗಳಲ್ಲಿ ಉತ್ತಮ ಅನುಭವದ ಭರವಸೆಯನ್ನು ನೀಡುತ್ತದೆ.

AI ವೈಶಿಷ್ಟ್ಯಗಳು
Samsung Galaxy S26 Ultra ದಲ್ಲಿ ಸ್ಯಾಮ್ಸಂಗ್ ತನ್ನ ಹಲವಾರು ಹೊಸ ಗ್ಯಾಲಕ್ಸಿ AI ವೈಶಿಷ್ಟ್ಯಗಳನ್ನು ವಿಸ್ತರಿಸಿದೆ. Now Assist ಫೀಚರ್ ಪರದೆಯಲ್ಲಿನ ಚಟುವಟಿಕೆ ಆಧರಿಸಿ ಸಲಹೆಗಳನ್ನು ನೀಡುತ್ತದೆ. Call Screen ಅಪರಿಚಿತ ಕರೆಗಳನ್ನು ಸ್ವಯಂಚಾಲಿತವಾಗಿ ಸ್ವೀಕರಿಸಿ ಲೈವ್ ಟ್ರಾನ್ಸ್ಕ್ರಿಪ್ಟ್ ಒದಗಿಸುತ್ತದೆ. Photo Assist ಚಿತ್ರ ಸಂಪಾದನೆಗೆ ಎಐ ನೆರವು ನೀಡುತ್ತದೆ, Creative Studio ಕಂಟೆಂಟ್ ರಚನೆಗೆ ಉಪಕರಣಗಳನ್ನು ಒದಗಿಸುತ್ತದೆ. Privacy Alerts ಅಪ್ಲಿಕೇಶನ್‌ಗಳ ಡೇಟಾ ಪ್ರವೇಶದ ಬಗ್ಗೆ ಬಳಕೆದಾರರಿಗೆ ಸೂಚನೆ ನೀಡುತ್ತದೆ. ಆಯ್ದ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ಎಐ ನೊಯ್ಸ್ ರಿಡಕ್ಷನ್ ಕೂಡ ಲಭ್ಯ.

ಕ್ಯಾಮೆರಾ
ಫೋಟೋಗ್ರಫಿಗಾಗಿ, Samsung Galaxy S26 Ultra ದಲ್ಲಿ f/1.4 ಅಪರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 200-ಮೆಗಾಪಿಕ್ಸೆಲ್ ವೈಡ್-ಆಂಗಲ್ ಪ್ರಾಥಮಿಕ ಸಂವೇದಕದ ನೇತೃತ್ವದ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದು f/2.9 ಅಪರ್ಚರ್ ಮತ್ತು 5x ಆಪ್ಟಿಕಲ್ ಜೂಮ್ ಹೊಂದಿರುವ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, f/1.9 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು f/2.4 ಅಪರ್ಚರ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 10-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 8K ವೀಡಿಯೊ ರೆಕಾರ್ಡಿಂಗ್, HDR10+ ಹಾಗೂ 360 ಡಿಗ್ರಿ ಸ್ಥಿರೀಕರಣ ಬೆಂಬಲವನ್ನು ನೀಡುತ್ತದೆ. ಮುಂಭಾಗದಲ್ಲಿ, ಫೋನ್ f/2.2 ಅಪರ್ಚರ್ ಮತ್ತು 4K ವೀಡಿಯೊ ರೆಕಾರ್ಡಿಂಗ್ ಬೆಂಬಲದೊಂದಿಗೆ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಭಾರತದಲ್ಲಿನ ಬೆಲೆ
ಭಾರತದಲ್ಲಿ ಗ್ಯಾಲಕ್ಸಿ S26 ಅಲ್ಟ್ರಾ 12GB + 256GB ಮಾದರಿಯ ಬೆಲೆ ರೂ. 1,39,999ರಿಂದ ಆರಂಭವಾಗುತ್ತದೆ. ಇದರ 12GB + 512GB ಮಾದರಿಗೆ ರೂ. 1,59,999 ಮತ್ತು 16GB + 1TB ಉನ್ನತ ಆವೃತ್ತಿಗೆ ರೂ. 1,89,999 ಬೆಲೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕಪ್ಪು, ನೀಲಿ, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದು, ಭಾರತದ ಎಲ್ಲಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಹಾಗೂ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ.
ಆರಂಭಿಕ ಅಪ್ ಗೃೇಡ್ ಕೊಡುಗೆಯಾಗಿ 256GB ಯ ಬೆಲೆಗೆ 512GB ಮಾದರಿಯ ಫೋನ್ ಕೊಡಲಾಗುತ್ತಿದೆ.











































error: Content is protected !!
Scroll to Top