ಕಾರ್ಕಳ : ಕಾರ್ಕಳ ಉಪವಿಭಾಗದ ಡಿವೈಎಸ್‌ಪಿಯಾಗಿ ಎಸ್. ವಿಜಯ ಪ್ರಸಾದ್ ಅವರು ಫೆ. 27ರಂದು ಅಧಿಕಾರ ಸ್ವೀಕರಿಸಿದರು.
ಉಡುಪಿ ತಾಲೂಕು ಸಾಲಿಗ್ರಾಮದ ವಿಜಯ ಪ್ರಸಾದ್ ಅವರು ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಎಸ್‌ಐ ಆಗಿ ಬಳಿಕ ಕಾರ್ಕಳ, ಉತ್ತರ ಕನ್ನಡದಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಕರ್ನಾಟಕ ಲೋಕಾಯುಕ್ತ ಮಂಗಳೂರು ಘಟಕದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು.
2021ರಲ್ಲಿ ಕಾರ್ಕಳ ಡಿವೈಎಸ್ಪಿಯಾಗಿ ಕರ್ತವ್ಯ
ಅವರು 2021 ಜೂನ್‌ನಲ್ಲಿ ಡಿವೈಎಸ್‌ಪಿಯಾಗಿ ಭಡ್ತಿಗೊಂಡು ಕಾರ್ಕಳಕ್ಕೆ ವರ್ಗಾವಣೆಯಾಗಿದ್ದರು. ಈ ವೇಳೆ ಕಾರ್ಕಳ ಉತ್ಸವ, ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಖುದ್ದಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. 2023ರಲ್ಲಿ ಕಾರವಾರ ಡಿಸಿಆರ್‌ಬಿ ಡಿವೈಎಸ್‌ಪಿಯಾಗಿ ಕಾರ್ಕಳದಿಂದ ವರ್ಗಾವಣೆ ಹೊಂದಿದ್ದು, ಬಳಿಕ ಬಂಟ್ವಾಳದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಮತ್ತೊಮ್ಮೆ ಕಾರ್ಕಳದ ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.















































































