ಫೆ. 28 : ಅಜೆಕಾರು ಮರ್ಣೆ ಶ್ರೀ ಕೊಡಮಣಿತ್ತಾಯ – ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ

ಕಾರ್ಕಳ : ಅಜೆಕಾರು ಮರ್ಣೆ ಶ್ರೀ ಕೊಡಮಣಿತ್ತಾಯ – ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಫೆ. 28ರಂದು ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಕುರ್ಪಾಡಿಗುತ್ತು ಮನೆಯಿಂದ ಕೆಮ್ಮಂಜ ಸ್ಥಾನಕ್ಕೆ ಭಂಡಾರ ಆಗಮನ, 11 ಗಂಟೆಗೆ ಧ್ವಜಾರೋಹಣ, 12:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಧರ್ಮರಸು ದೈವದ ನೇಮ, ರಾತ್ರಿ 7 ಗಂಟೆಗೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ನೇಮೋತ್ಸವ, ರಾತ್ರಿ 10 ಗಂಟೆಗೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 2 ಗಂಟೆಗೆ ಮಾಯಂದಾಲೆ ನೇಮೋತ್ಸವ ನಡೆಯಲಿದೆ ಎಂದು ಗರಡಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಮಾ. 13 ರಂದು ಬಂಡಸಾಲೆ ಮಾರಿಗುಡಿಯ 25ನೇ ವರ್ಷದ ವರ್ಧಂತ್ಯುತ್ಸವ
ಮರ್ಣೆ ಬಂಡಸಾಲೆ ಮಾರಿಗುಡಿಯ 25ನೇ ವರ್ಷದ ವರ್ಧಂತ್ಯುತ್ಸವ ಮಾ. 13 ರಂದು ಜರುಗಲಿದೆ. ಅಂದು ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ತೋರಣ ಮುಹೂರ್ತ, ನವಕ ಪ್ರಧಾನ ಹೋಮ, ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ 8 ಗಂಟೆಯವರೆಗೆ ಭಜನೆ, ರಾತ್ರಿ 8 ಗಂಟೆಗೆ ಗೋಂದ್ಲು ಪೂಜೆ ನಡೆಯಲಿದೆ ಎಂದು ಕುರ್ಪಾಡಿಗುತ್ತು ಅನುವಂಶಿಕ ಆಡಳಿತ ಮೊಕ್ತೇಸರ ಶಿವಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































error: Content is protected !!
Scroll to Top