ಫೆ. 26 : ಜೋಡುರಸ್ತೆಯಲ್ಲಿ ಮಾನಸ ಕಂಫರ್ಟ್ಸ್‌ ಶುಭಾರಂಭ

ಕಾರ್ಕಳ : ಜೋಡುರಸ್ತೆಯಲ್ಲಿನ ಕಾರ್ಲ ಸಿಟಿಸೆಂಟರ್‌ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ ಮಾನಸ ಕಂಫರ್ಟ್ಸ್‌ ಫೆ. 26ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದಾರೆ. ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಉಷಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ವಿ. ಸುನಿಲ್‌ ಕುಮಾರ್‌, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಜಯಪ್ರಕಾಶ್‌ ಹೆಗ್ಡೆ, ಉದಯ್‌ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು, ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಕ್ರಿಯೇಟಿವ್‌ ಎಜ್ಯುಕೇಶನ್‌ ಫೌಂಡೇಶನ್‌ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ, ನ್ಯಾಯವಾದಿಗಳಾದ ಶೇಖರ್‌ ಮಡಿವಾಳ, ಮಣಿರಾಜ ಶೆಟ್ಟಿ, ಪುರಸಭಾ ಸದಸ್ಯ ಆಶ್ಫಾಕ್‌ ಅಹಮ್ಮದ್‌ ಹಾಗೂ ಸಂತೋಷ್‌ ಕ್ಯಾಶ್ಯೂಸ್‌ ನಿಟ್ಟೆಯ ಸಂತೋಷ್ ಡಿ ಸಿಲ್ವ ಭಾಗಿಯಾಗಲಿದ್ದಾರೆ.





























































































































error: Content is protected !!
Scroll to Top