ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದ ವ್ಯಕ್ತಿಗೆ 5 ಸಾ. ರೂ. ದಂಡ ವಿಧಿಸಿದ ಬೈಲೂರು ಪಂಚಾಯತ್‌

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದ ವ್ಯಕ್ತಿಗೆ 5 ಸಾ. ರೂ. ದಂಡ ವಿಧಿಸಿದ ಘಟನೆ ಬೈಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೌಡೂರು ಮಾಣಿಕುಮೇರಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಕಸ ಬಿಸಾಡುತ್ತಿರುವ ಬಗ್ಗೆ ಸ್ಥಳೀಯರಿಂದ ಪಂಚಾಯತ್‌ಗೆ ದೂರು ಬರುತ್ತಲೇ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅವರು ಕಸ ಬಿಸಾಡಿದ ವ್ಯಕ್ತಿಯೋರ್ವರ ಮೇಲೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪಂಚಾಯತ್‌ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿಲ್ಲಿ ಕಸ ಬಿಸಾಡುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಕೆಲ ಸ್ಥಳದಲ್ಲಿ ಸೋಲಾರ್ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಸಿಸಿ ಕ್ಯಾಮೆರವಿರುವ ಸ್ಥಳವನ್ನು ಬಿಟ್ಟು ಬೇರೆಡೆ ಕಸ ಬಿಸಾಕುತ್ತಿದ್ದಾರೆ. ಇದೀಗ ಅಂತಹ ವ್ಯಕ್ತಿಯೋರ್ವರ ಮೇಲೆ ದಂಡ ವಿಧಿಸುವ ಮೂಲಕ ಮತ್ತೊಮ್ಮೆ ಜನತೆಗೆ ಪಂಚಾಯತ್‌ ಎಚ್ಚರಿಕೆ ನೀಡಿದೆ.

ಇನ್ನು ಪಂಚಾಯತ್‌ನಿಂದ ಕುಡಿಯಲು ಮತ್ತು ಇತರೆ ಮೂಲಭೂತ ಅವಶ್ಯಕತೆಗಳಿಗಾಗಿ ಸರಬರಾಜು ಮಾಡುವ ನೀರನ್ನು ಕೆಲವರು ಅನಾವಶ್ಯಕವಾಗಿ ಪೋಲು ಮಾಡುತ್ತಿರುವ ಘಟನೆಯೂ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಇದು ಹೀಗೆ ಮುಂದುವರಿದರೆ ಈ ಕುರಿತಾಗಿಯೂ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್‌ ತಿಳಿಸಿದೆ.









































































































error: Content is protected !!
Scroll to Top