ಕಾರ್ಕಳ : ಸ್ಕೂಟಿಗೆ ಡಿಕ್ಕಿ ಹೊಡೆದು ಬುಲೆಟ್ ಸವಾರ ಪರಾರಿಯಾದ ಘಟನೆ ಫೆ. 9ರಂದು ಹೆಬ್ರಿಯಲ್ಲಿ ನಡೆದಿದೆ. ಮಡಾಮಕ್ಕಿ ಗ್ರಾಮದ ಉಮೇಶ್ ಶೆಟ್ಟಿಯವರು ತಮ್ಮ ಸ್ಕೂಟಿಯಲ್ಲಿ ಬಾವ ಸಂತೋಷ್ ಶೆಟ್ಟಿಯವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿ ಕಡೆಗೆ ಸಾಗುತ್ತಿದ್ದಾಗ ಮಾಂಡಿ ಮೂರುಕೈ ರಸ್ತೆಯ ಹಾಲೆಕೊಡ್ಲು ಎಂಬಲ್ಲಿ ಹೆಬ್ರಿ ಕಡೆಯಿಂದ ಬರುತ್ತಿದ್ದ ಬುಲೆಟ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟಿಯಲ್ಲಿದ್ದ ಸಹಸವಾರ ಸಂತೋಷ್ ಶೆಟ್ಟಿ ಗಾಯಗೊಂಡಿದ್ದಾರೆ. ಅಪಘಾತಗೊಳಿಸಿದ ಬುಲೆಟ್ ಸವಾರ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳುವಿಗೆ ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಕೂಟಿಗೆ ಡಿಕ್ಕಿ – ಬುಲೆಟ್ ಸವಾರ ಪರಾರಿ















































