ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ವಾಹನ ಸಮೇತ ಕಾಣೆ

ಕಾರ್ಕಳ : ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ವಾಹನ ಸಮೇತ ಕಾಣೆಯಾದ ಘಟನೆ ಫೆ. 9ರಂದು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಡ್ತಲ ಗ್ರಾಮದ ರಮೇಶ್ ಕುಮಾರ್ ಎಂಬವರು ಮಠದ ಬೆಟ್ಟುವಿನಿಂದ ವರಂಗಕ್ಕೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಕೇರಳದ ಸಾಬು .ಕೆ.ಎಸ್. (44) ಮತ್ತು ಮೊಹಮ್ಮದ್ ಅರಾಫತ್ (41) ಎಂಬುವವರನ್ನು ಬೆಳ್ಳಿಗೆ 4 ಗಂಟೆಗೆ ಮಾರುತಿ ಓಮಿನಿ KL-01-AU-0934 ವಾಹನದಲ್ಲಿ ಕಳುಹಿಸಿಕೊಟ್ಟಿದ್ದರು. ಆದರೆ ಅವರು ಕೆಲಸಕ್ಕೆ ಬಾರದೇ ಇದ್ದು ವಾಹನ ಸಮೇತ ಕಾಣೆಯಾಗಿರುತ್ತಾರೆ ಎಂದು ಪ್ರಕರಣ ದಾಖಲಾಗಿರುತ್ತದೆ.































































































error: Content is protected !!
Scroll to Top