ಹಂದಿಗಿಟ್ಟ ಸ್ಫೋಟಕಕ್ಕೆ ಬಲಿಯಾದ ಸಾಕು ನಾಯಿ

ಕಾರ್ಕಳ : ಹಂದಿಗಿಟ್ಟ ಸ್ಫೋಟಕ ತಿಂದು ಸಾಕು ನಾಯಿಯೊಂದು ಸಾವನಪ್ಪಿದ ದಾರುಣ ಘಟನೆ ನೀರೆ ಗ್ರಾಮದ ನಾಟ್ಲದಲ್ಲಿ ನಡೆದಿದೆ.
ರವೀಂದ್ರ ಪೂಜಾರಿ ಎಂಬವರ ಮನೆಯ ನಾಯಿಯು ಫೆ. 1ರಂದು ಸಂಜೆ ಮನೆಯಿಂದ ಹೊರಗಡೆ ಹೋಗಿದ್ದು ರಾತ್ರಿಯಾದರೂ ವಾಪಾಸು ಮನೆಗೆ ಬಾರದೇ ಇದ್ದು ಫೆ. 2 ರಂದು ಬೆಳಿಗ್ಗೆ ಹುಡುಕಾಡಿದಾಗ ಮನೆಯ ಸಮೀಪದ ಹಾಡಿಯಲ್ಲಿ ಸತ್ತು ಬಿದ್ದಿದ್ದು ಅದರ ತಲೆಯ ಭಾಗ, ಮುಖ ಸಂಪೂರ್ಣವಾಗಿ ಛಿದ್ರವಾಗಿತ್ತು. ಯಾರೋ ಅಪರಿಚಿತರು ಪ್ರಾಣಿ ಹಿಂಸೆ ಮಾಡುವ ಉದ್ದೇಶದಿಂದ ಯಾವುದೋ ಸ್ಫೋಟಕವನ್ನು ರವೀಂದ್ರ ಅವರ ವಾಸದ ಮನೆ ಸಮೀಪದ ಹಾಡಿಯಲ್ಲಿ ಇಟ್ಟಿದ್ದನ್ನು ನಾಯಿ ತಿಂದು ಸ್ಫೋಟಗೊಂಡು ಮೃತಪಟ್ಟಿದೆ ಎಂದು ರವೀಂದ್ರ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















error: Content is protected !!
Scroll to Top