ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಘಟನೆ ಹೆಬ್ರಿಯ ಕೆರೆಬೆಟ್ಟು ಗ್ರಾಮದ ಅಸ್ರಂಬಲ್ಲಿಯಲ್ಲಿ ನಡೆದಿದೆ. ಜಗದೀಶ್‌ ಆಚಾರ್ಯ (54) ನೇಣಿಗೆ ಶರಣಾದವರು. ಇವರು ಮರದ ಶಿಲ್ಪಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಮಾಡುವ ಚಟ ಹೊಂದಿದ್ದರು. ಆರ್ಥಿಕ ಸಮಸ್ಯೆಯಿದ್ದು ಇದೇ ಕಾರಣವಾಗಿ ಫೆ. 1ರಂದು ರಾತ್ರಿ 9-30ರಿಂದ ಫೆ. 2ರ ಬೆಳಗ್ಗೆ 7-30ರ ಮದ್ಯಾವಧಿಯಲ್ಲಿ ಮನೆಯ ಪಕ್ಕದ ಹಾಡಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































































































































































error: Content is protected !!
Scroll to Top