ಎ. 1-3 : ನೀರೆ ಗರಡಿಯ ವಾರ್ಷಿಕ ನೇಮೋತ್ಸವ

ಕಾರ್ಕಳ : ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಎ.1 ರಿಂದ ಎ. 3ರವರೆಗೆ ನಡೆಯಲಿದೆ.

ಎ. 1ರಂದು ಬೆಳಿಗ್ಗೆ 9 ಗಂಟೆಗೆ ಭಂಡಾರದ ಮನೆ ಪೆರಿಮಾರು ಗುತ್ತು ಮನೆಯಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು ಗರಡಿಗೆ ಬರುವುದು. ಅನಂತರ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ ಗಂಟೆ 12-30ರಿಂದ 3 ಗಂಟೆ ತನಕ ಸಾರ್ವಜನಿಕ ಅನ್ನಸಂತರ್ಪಣೆಯಾಗಲಿದೆ. ಸಂಜೆ 7 ಗಂಟೆಯಿಂದ ಧರ್ಮರಸು ಮತ್ತು ಕೊಡಮಣಿತ್ತಾಯಿ ನೇಮೋತ್ಸವ ಜರಗುವುದು. ಎ. 2ರಂದು ರಾತ್ರಿ ಬೈದರ್ಕಳ ನೇಮೋತ್ಸವನಡೆಯಲಿದೆ. ಎ. 3ರಂದು ಸಂಜೆ 3 ಗಂಟೆಯಿಂದ ಮಾಯಂದಾಲ ನೇಮ, ಅಣ್ಣಪ್ಪ ಪಂಜುರ್ಲಿ ಧೂಮಾವತಿ, ಹುಲಿ ಚಾಮುಂಡಿ ಕೋಲ ನಡೆದು ಕೊಡಿ ಇಳಿಸಿ ರಾತ್ರಿ 7 ಗಂಟೆಗೆ ನೀರೆ ಪೆರಿಮಾರು ಗುತ್ತು ಮನೆಗೆ ಭಂಡಾರ ಹಿಂತಿರುಗುವುದು ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.























































error: Content is protected !!
Scroll to Top