ಮನರೇಗಾದ ಮೂಲ ಸ್ವರೂಪವನ್ನೇ ಬದಲಾಯಿಸುವ ಹುನ್ನಾರ – ಉದಯ್‌ ಶೆಟ್ಟಿ ಮುನಿಯಾಲು

ಕಾರ್ಕಳ : ಗಾಂಧಿಯ ಹೆಸರಿನ ಮೂಲಕ ಜನರ ಉದ್ದಾರ ಆಗಬೇಕೆಂದು ಕಾಂಗ್ರೆಸ್‌ ಬಯಸಿತ್ತು. ಮನರೇಗಾ ಶ್ರೀಮಂತರ ಯೋಜನೆಯಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಪ್ರಯೋಜನ ದೊರೆಯಬೇಕೆನ್ನವುದು ಕಾಂಗ್ರೆಸ್‌ ಇರಾದೆಯಾಗಿತ್ತು. ಆದರೆ, ಕೇಂದ್ರ ಸರಕಾರ ಇದೀಗ ಯೋಜನೆಯ ಹೆಸರು ಮಾತ್ರವಲ್ಲದೇ ಮೂಲ‌ ಸ್ವರೂಪವನ್ನೇ ಬದಲಾಯಿಸುವ ಹುನ್ನಾರ ಮಾಡಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಅವರು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಜ. 31ರಂದು ನಡೆದ ಮನರೇಗಾ ಬಚಾವೋ ಸಂಗ್ರಾಮ ಗಾಂಧಿ ನಡಿಗೆ – ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್‌ಚಂದ್ರಪಾಲ್‌ ನಕ್ರೆ ಮಾತನಾಡಿ, ದೇಶದ ಬಡವರಿಗೆ ಅನ್ಯಾಯವಾದಾಗ ಕಾಂಗ್ರೆಸ್‌ ಎಂದಿಗೂ ಸುಮ್ಮನೇ ಕೂರುವುದಿಲ್ಲ. ಆದ್ದರಿಂದ ಸ್ವೇಚ್ಚಾರದ ರಾಜಕೀಯಕ್ಕೆ ಬಿಜೆಪಿಯವರು ಜನಪರ ಯೋಜನೆಯಾದ ಮನರೇಗಾದ ಹೆಸರನ್ನು ಬದಲಾಯಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದ ಅವರು ಬೇರೆಯಾರದಾದ್ದರೂ ಹೆಸರಿಡಬಹುದಿತ್ತಲ್ಲವೇ..? ರಾಮನ ಹೆಸರೇ ಏಕೆ..? ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗರಿಗೆ ಯೋಜನೆಗೆ ರಾಮನ ಹೆಸರನ್ನು ಇಡುವ ನೈತಿಕತೆಯಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಶೇಖರ್‌ ಮಡಿವಾಳ್‌ ಮಾತನಾಡಿ, ಅ. 2, ಜ. 30ರಂದು ಗಾಂಧಿ ಪ್ರತಿಮೆಯ ಮುಂದೆ ತೆರಳಿ ಕೈ ಮುಗಿಯುವ ಪ್ರಧಾನಿಯವರಿಗೆ ಮನರೇಗಾ ಯೋಜನೆಯ ಹೆಸರು ಬದಲಾಯಿಸುವ ಅವಶ್ಯಕತೆ ಏನಿತ್ತು ? ಮನರೇಗಾ ಹೆಸರಿನಿಂದ ಆದ ತೊಂದರೆಯೇನು ? ದೇಶಕ್ಕಾದ ಸಮಸ್ಯೆಯೇನು ಎಂಬುದಕ್ಕೆ ಕೇಂದ್ರ ಸರಕಾರ ಉತ್ತರಿಸಲಿ ಎಂದು ಆಗ್ರಹಿಸಿದ ಅವರು ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಿಹಾಕಬೇಕೆನ್ನುವ ಉದ್ದೇಶ ಕೇಂದ್ರ ಸರಕಾರಕ್ಕಿದೆ. ಬಡವರ ಏಳಿಗೆಗಾಗಿ ಯೋಜನೆ ಜಾರಿಗೆ ತಂದ ಕಾಂಗ್ರೆಸ್‌ ಹೆಸರನ್ನು ಬದಲಾಯಿಸಲೂ ಬಿಡುವುದಿಲ್ಲ ಎಂದರು.
2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯು ಅತ್ಯಂತ ಕರಾಳ ಅಧ್ಯಯವಾಗಿದೆ. ನಿರುದ್ಯೋಗ ಸಮಸ್ಯೆ, ಆರ್ಥಿಕ ಸಂಕಷ್ಟ ತಾಂಡವವಾಡುತ್ತಿದೆ ಎಂದು ಕೇಂದ್ರ ಸರಕಾರದ ಕಾರ್ಯ ವೈಖರಿಯನ್ನು ಶೇಖರ್‌ ಮಡಿವಾಳ್‌ ಟೀಕಿಸಿದರು.

ಬಿಜೆಪಿಗರಿಂದ ಗಾಂಧೀಜಿಯ ಸಿದ್ಧಾಂತವನ್ನು ಕೊಲ್ಲುವ ಪ್ರಯತ್ನ – ಶುಭದ ರಾವ್
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌, ಬಡಜನರ ಪಾಲಿಗೆ ಒಳ್ಳೆಯ ಬದುಕು ಕಟ್ಟಿಕೊಡುವ ಮನರೇಗಾ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಹಾಗೇ ಉಳಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಅಂದು ಒಬ್ಬ ಮತೀಯ ಭಯೋತ್ಪಾದಕನ ಗುಂಡಿಗೆ ಮಹಾತ್ಮ ಗಾಂಧೀಜಿಯವರು ಬಲಿಯಾದರೇ ಇಂದು ಅವರ ತತ್ವಾ ಸಿದ್ಧಾಂತಗಳನ್ನು ದಿನನಿತ್ಯ ಕೊಲ್ಲುವ ಪ್ರಯತ್ನವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಯೋಜನೆಯ ಕ್ರೇಡಿಟ್‌ ಕಾಂಗ್ರೆಸ್‌ ಪಕ್ಷಕ್ಕೆ ಹೋಗುತ್ತದೆ ಎಂಬ ಕಾರಣಕ್ಕೆ ಅದರ ಹೆಸರನ್ನೇ ಬದಲಾಯಿಸುವ ಪ್ರಯತ್ನ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಿಂದ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಯಿತು. ಬಳಿಕ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಯೋಜನೆಯ ಹೆಸರು ಬದಲಾಯಿಸದಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಿನಾಥ್ ಭಟ್, ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ ಬೇಲಾಡಿ, ಮುಖಂಡರಾದ ಜಾರ್ಜ್ ಕ್ಯಾಸ್ತಲಿನೋ. ದೀಪಕ್‌ ಕೋಟ್ಯಾನ್‌ ಇನ್ನಾ, ಪ್ರಭಾಕರ್ ಬಂಗೇರ, ಶೇಕ್ ಶಬ್ಬೀರ್, ರಾಜೇಶ್, ಸುಪ್ರೀತ್‌ ಶೆಟ್ಟಿ ಕೆದಿಂಜೆ, ಸುಧಾಕರ್‌, ಲೀನಾ ಡಿಸೋಜ, ಪ್ರತಿಮಾ ರಾಣೆ ಮೊದಲಾದವರು ಪಾಲ್ಗೊಂಡಿದ್ದರು.

































































































































































error: Content is protected !!
Scroll to Top