ಶೈಕ್ಷಣಿಕ ಸಾಧಕಿ ಸಾಂಜಲಿ ಎಸ್‌. ಶೆಟ್ಟಿಗೆ 50 ಸಾ. ರೂ. ಚೆಕ್‌ ಹಸ್ತಾಂತರ

ಕಾರ್ಕಳ : 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನ ಸಾಂಜಲಿ ಎಸ್. ಶೆಟ್ಟಿ ಅವರಿಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರ ವತಿಯಿಂದ 77ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಐವತ್ತು ಸಾವಿರ ರೂ. (ಲ್ಯಾಪ್‌ಟಾಪ್‌ ಬದಲಿಗೆ) ಚೆಕ್‌ ಅನ್ನು ನೀಡಲಾಯಿತು. ಮಂಜುನಾಥ ಪೈ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚೆಕ್‌ನ್ನು ಸಾಂಜಲಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ತಹಶೀಲ್ದಾರ್‌ ಪ್ರದೀಪ್‌ ಆರ್.‌, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ರಾವ್‌ ಎಂ. ವಿ., ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.‌ ಆರ್.‌ ಉಪಸ್ಥಿತರಿದ್ದರು. ಸಾಂಜಲಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಜ್ಯೋತ್ಸ್ನಾ ದಂಪತಿಯ ಪುತ್ರಿ.









































































































error: Content is protected !!
Scroll to Top