ಮಹಾಭಾರತ ಭಾವದೀಪ – ವರ್ಷಪೂರ್ತಿ ಉಪನ್ಯಾಸ : ಆರ್ಷಕಾವ್ಯ – ಉಪಕ್ರಮಪರ್ವ

ಕಾರ್ಕಳ : ಕಾಂತಾವರ ಕನ್ನಡ ಸಂಘ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ, ಅಲ್ಲಮಪ್ರಭು ಪೀಠ ಕಾಂತಾವರ ಜಂಟಿಯಾಗಿ ಆಯೋಜಿಸಿದ ಮಹಾಭಾರತ ಭಾವದೀಪ – ವರ್ಷಪೂರ್ತಿ ಉಪನ್ಯಾಸ ಮಾಲೆಯ ಮೊದಲ ಸೋಪಾನವಾಗಿ ಆರ್ಷಕಾವ್ಯ – ಉಪಕ್ರಮಪರ್ವ ಕುರಿತು ಡಾ. ವಿನಾಯಕ ಭಟ್ ಗಾಳಿಮನೆ ಅವರು ಪ್ರಕಾಶ್‌ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮಹಾಭಾರತ ಕಾವ್ಯದ ಬಗ್ಗೆ ಮಾಹಿತಿ ನೀಡಿದ ಅವರು ಧೃತರಾಷ್ಟ್ರ – ಸಂಜಯರ ನಡುವಿನ ವಿಶಿಷ್ಟ ಸಂವಾದವನ್ನೂ ಸಾಂದರ್ಭಿಕವಾಗಿ ವಿವರಿಸಿದರು. ಕನ್ನಡ ಸಂಘ ಕಾಂತಾವರದ ಅಧ್ಯಕ್ಷ ಡಾ.ನಾ. ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು. ಶಾರ್ವರಿ ಶ್ಯಾನುಭೋಗ ಪ್ರಾರ್ಥಿಸಿದರು. ಅ.ಭಾ.ಸಾ.ಪ. ಗೌರವ ಅಧ್ಯಕ್ಷ ನಿತ್ಯಾನಂದ ಪೈ ಸ್ವಾಗತಿಸಿ, ಸುಲೋಚನ ಬಿ. ವಿ. ಪರಿಚಯಿಸಿದರು. ಡಾ. ಮಾಲತಿ ಪೈ ಕಾರ್ಯಕ್ರಮ ನಿರೂಪಿಸಿ, ಅ.ಭಾ.ಸಾ.ಪ. ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ವಂದಿಸಿದರು.









































































































error: Content is protected !!
Scroll to Top