ಪತಿಯಿಂದ ಹಲ್ಲೆ – ಪತ್ನಿ ಆಸ್ಪತ್ರೆ ದಾಖಲು

ಕಾರ್ಕಳ : ಪತಿಯಿಂದ ಹಲ್ಲೆಗೊಳಾಗಿ ಪತ್ನಿ ಆಸ್ಪತ್ರೆ ದಾಖಲಾದ ಘಟನೆ ಜ. 27ರಂದು ನೂರಾಳ್ ಬೆಟ್ಟುವಿನಲ್ಲಿ ನಡೆದಿದೆ.
ಗೀತಾ ಮತ್ತವರ ಗಂಡ ಸುನೀಲ್‌ ಕುಮಾರ್‌ ಮಧ್ಯೆ ಜ. 27ರಂದು ಬೆಳಿಗ್ಗೆ ಸಾಂಸಾರಿಕ ವಿಚಾರವಾಗಿ ಗಲಾಟೆ ನಡೆದಿದ್ದು ಈ ವೇಳೆ ಸುನೀಲ್ ಯಾವುದೋ ಆಯುಧದಿಂದ ಗೀತಾ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಾಳುವಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ಎದೆಯ ಭಾಗದ ಮೂಳೆಗಳು ಮುರಿದಿದ್ದು, ಹೊಟ್ಟೆಯ ಒಳ ಭಾಗಕ್ಕೆ ತೀವ್ರವಾದ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top