ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ – ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್‌

ಕಾರ್ಕಳ : ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್‌ ಆಯ್ಕೆಯಾಗಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ಬೆಂಗಳೂರು ಇದರ ವತಿಯಿಂದ ಇತ್ತೀಚೆಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಶ್ರೀ ನಾರಾಯಣ ಗುರು ತತ್ವ ಪೂಜೆ ಹಾಗೂ ದಶಮಾನೋತ್ಸವ ಕ್ರೀಡಾ ಜ್ಯೋತಿಯಾತ್ರೆಯ ಪೂರ್ವ ತಯಾರಿ ಶಿಬಿರದಲ್ಲಿ ರಾಜ್ಯದ ವಿವಿಧ ತಾಲೂಕು ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಕಳ ತಾಲೂಕು (BSNDP) ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಅವರನ್ನು ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪಲತಾ ಚಂದ್ರು ಹಾಗೂ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್ ಹಾಗೂ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಮಮತಾ ಅಂಚನ್‌ ಅವರು ಪೆರ್ವಾಜೆಯ ರಾಜು ಅವರ ಪತ್ನಿ. ಪುರಸಭಾ ಸದಸ್ಯರಾಗಿ, ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷೆಯಾಗಿ, ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ ಪತ್ತೊಂಜಿಕಟ್ಟೆ ಪೆರ್ವಾಜೆ ಇದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಸೀನಿಯರ್‌ ಚೇಂಬರ್‌ ಇಂಟರ್‌ನ್ಯಾಷನಲ್‌ ರಾಕ್‌ ಸಿಟಿ ಕಾರ್ಕಳದ ಸದಸ್ಯರಾಗಿರುತ್ತಾರೆ.









































































































error: Content is protected !!
Scroll to Top