ಕಾರ್ಕಳ : ಪೆರ್ವಾಜೆ ರಸ್ತೆಯ ಆಕೃತಿ ಸಿಲ್ಕ್ಸ್ ಕಾಂಪ್ಲೆಕ್ಸ್ ಬಳಿ ಕಾರ್ಯಾಚರಿಸುತ್ತಿದ್ದ ಬಜಾಜ್ ಫೈನಾನ್ಸ್ ಲಿ. ಬಜಾಜ್ ಫಿನ್‌ಸರ್ವ್ ಗೋಲ್ಡ್ ಲೋನ್ ಕಚೇರಿ ಸ್ಥಳಾಂತರಗೊಂಡು ಮಾರ್ಕೆಟ್ ರೋಡ್ ಕೆಬಿಪಿ ಶೆಣೈ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಜ. 23ರಂದು ನೂತನ ಕಚೇರಿ ಶುಭಾರಂಭಗೊಂಡಿತು.

ಉದ್ಘಾಟನೆಯಂಗವಾಗಿ ಕಚೇರಿಯಲ್ಲಿ ಗಣಹೋಮ ನೆರವೇರಿತು. ಈ ಸಂದರ್ಭ ಮ್ಯಾನೇಜರ್ ಸಂದೀಪ್, ಏರಿಯಾ ಮ್ಯಾನೇಜರ್ ಯತೀಶ್ ಜಿ., ಅಸಿಟೆಂಟ್ ಮ್ಯಾನೇಜರ್ ಅಕ್ಷಯ್ ಶೆಟ್ಟಿ, ರಿಲೇಶನ್‌ಶಿಪ್ ಮ್ಯಾನೇಜರ್ ಆದಿತ್ಯ ಆಚಾರ್ಯ, ಸಿಬ್ಬಂದಿ ಸಂಗೀತಾ ಹಾಗೂ ಕಟ್ಟಡ ಮಾಲಕರಾದ ಬಿ. ಗಣೇಶ್ ಶೆಣೈ ಉಪಸ್ಥಿತರಿದ್ದರು.
















































































