ಕಾರ್ಕಳ : ಬೈಲೂರು ವಲಯ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ, ಸುಮಾರು 35 ವರ್ಷಗಳಿಂದ ನೀರೆ ಬೈಲೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗಣಪತಿ ವಿಗ್ರಹ ತಯಾರಕರಾಗಿದ್ದ, ಚಿನ್ನದ ಕೆಲಸಗಾರ ಜಿ. ರಾಘವೇಂದ್ರ ಆಚಾರ್ಯ ಬೈಲೂರು (77) ಜ.5ರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಸಂಸ್ಕಾರ ನಾಳೆ ಬೈಲೂರು ಹೈಸ್ಕೂಲ್ ಬಳಿಯಿರುವ ಅವರ ಸ್ವಗೃಹದಲ್ಲಿ ನಡೆಯಲಿದ್ದು, ಬೆಳಿಗ್ಗೆ 11.30ರಿಂದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಿ. ರಾಘವೇಂದ್ರ ಆಚಾರ್ಯ ಬೈಲೂರು ನಿಧನ
















































