ಕಾರ್ಕಳ : ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ನಡೆದ 22ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳ ಜ. 3ರ ಬೆಳಗ್ಗೆ ಪ್ರಾರಂಭಗೊಂಡು ಜ.4ರ ರಾತ್ರಿ 8 ಗಂಟೆಗೆ ಸಮಾಪ್ತಿಗೊಂಡಿತು. ಕಂಬಳ ಕೂಟದಲ್ಲಿ ಒಟ್ಟು 205 ಜತೆ ಕೋಣಗಳು ಭಾಗವಹಿಸಿದವು.
ಹಗ್ಗ ಹಿರಿಯ
ಪ್ರಥಮ – ಮುಡಾರು ಹಚ್ಚೊಟ್ಟು ಪ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್ (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ – ಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (ಓಡಿಸಿದವರು : ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)
ಹಗ್ಗ ಕಿರಿಯ
ಪ್ರಥಮ – ಹೊಸ್ಮಾರು ಸೂರ್ಯ ಶ್ರೀ ಜ್ಯೋತಿ ಸುರೇಶ್ ಶೆಟ್ಟಿ (ಓಡಿಸಿದವರು : ಕಡಂದಲೆ ಮೂಡಾಯಿಬೆಟ್ಟು ಮೋಹಿತ್ ಪಾಣಾರ)
ದ್ವಿತೀಯ – ಮಿಯ್ಯಾರು ಹಿಣಪ್ಪಾಡಿ ಬ್ರಿಜೇಶ್ ಪಡಿವಾಳ್ ಎ (ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)

ಅಡ್ಡ ಹಲಗೆ
ಪ್ರಥಮ – ನಾರಾವಿ ರಕ್ಷಿತ್ ಜೈನ್ (ಓಡಿಸಿದವರು : ಭಟ್ಕಳ ಹರೀಶ್)
ದ್ವಿತೀಯ - ಕೋಂಟಡ್ಕ ರೆಂಜಾಳ ಆಶ್ಲಿನ್ ಲಾರೆನ್ಸ್ ಮೆಂಡೊನ್ಸಾ (ಓಡಿಸಿದವರು : ಉಳ್ಳೂರು ಕಂದಾವರ ಗಣೇಶ್)
ನೇಗಿಲು ಹಿರಿಯ
ಪ್ರಥಮ - ಬೋಳದಗುತ್ತು ಸತೀಶ್ ಶೆಟ್ಟಿ ಎ. (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ – ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ಎ. (ಓಡಿಸಿದವರು : ಕಕ್ಕೆಪದವು ಕೃತಿಕ್ ಗೌಡ)
ನೇಗಿಲು ಕಿರಿಯ
ಪ್ರಥಮ – ಕಾರ್ಕಳ ಬಂಡಿಮಠ ಸಿದ್ಧಿವಿನಾಯಕಬೆಟ್ಟು ಕೋಡಿಮನೆ ಅದ್ವಿಕ್ ಅಶೋಕ್ ಶೆಟ್ಟಿ ಎ (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ – ಶ್ರೀ ಶಂಕರ್ ಮೂಡುಸೂರ ಈಶ್ವರಕಟ್ಟೆ ಪ್ರೇರಣಾ ಪ್ರತಾಪ್ ಭಂಡಾರಿ (ಓಡಿಸಿದವರು : ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ್)















































