ಶಿಲ್ಪಿ ಕೆ. ಸತೀಶ್‌ ಆಚಾರ್ಯರಿಗೆ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ

ಕಾರ್ಕಳ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿಗೆ ಕಾರ್ಕಳ ಹಿರಿಯಂಗಡಿಯ ಶಿಲ್ಪಾಗ್ರಾಮದ ಶಿಲ್ಪಿ ಕೆ. ಸತೀಶ್‌ ಆಚಾರ್ಯ ಭಾಜನರಾಗಿದ್ದಾರೆ. ಜ. 1ರಂದು ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್.‌ ಆಚಾರ್ಯ ಸಭಾಂಗಣದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಂದರ್ಭ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್‌, ದ.ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಜಿ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ಸುಮಾರು 40 ವರ್ಷಗಳಿಂದ ಶಿಲ್ಪಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಲ್ಪಿ ಕೆ. ಸತೀಶ್‌ ಆಚಾರ್ಯ ಅವರ ಕೆತ್ತನೆಯ ಶಿಲ್ಪಗಳನ್ನು ರಾಷ್ಟ್ರಪತಿ ಭವನದಲ್ಲೂ ಕಾಣಬಹುದಾಗಿದೆ. ಸತೀಶ್ ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟ ಶಿಲ್ಪಾಕೃತಿಯೆಂದರೆ ದೆಹಲಿಯ ಮೆಹರೋಲಿಯಲ್ಲಿನ ಹದಿಮೂರುವರೆ ಅಡಿ ಎತ್ತರದ ಬೃಹದಾಕಾರದ ಧ್ಯಾನಮುದ್ರೆಯ ಶ್ರೀಮಹಾವೀರನ ಶಿಲ್ಪ. 20 ಟನ್ ತೂಕದ ನಸುಗೆಂಪು ಗ್ರಾನೈಟ್ ಶಿಲೆಯಿಂದ ಈ ಶಿಲ್ಪವನ್ನು ನಿರ್ಮಿಸಲಾಗಿದೆ.











































error: Content is protected !!
Scroll to Top