ನಿಟ್ಟೆಯಲ್ಲಿ ಸರಣಿ ಅಪಘಾತ : ಮೊಟ್ಟೆ ಲಾರಿ ಪಲ್ಟಿ‌ – ಕಾರುಗಳು ಜಖಂ

ಕಾರ್ಕಳ : ನಿಟ್ಟೆಯಲ್ಲಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಪಾದಚಾರಿಯೋರ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಡಿ.29ರ ಬೆಳಿಗ್ಗೆ ನಡೆದಿದೆ.
ನಿಟ್ಟೆ ಗ್ರಾಮ ಪಂಚಾಯತ್‌ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾವಣಗೆರೆಯಿಂದ ಮಂಗಳೂರಿಗೆ ಸಾಗತ್ತಿದ್ದ ಮೊಟ್ಟೆ ಲಾರಿ ಮತ್ತು ಬೆಳ್ಮಣ್‌ ಕಡೆಯಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆಯೇ ಲಾರಿ ಪಲ್ಟಿಯಾಗಿದ್ದು ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಲಾರಿಯ ಹಿಂದುಗಡೆ ಬರುತ್ತಿದ್ದ ಒಂದು ಕಾರು ಕೂಡ ಅಪಘಾತಕ್ಕೊಳಗಾಗಿದೆ. ಅಪಘಾತದಲ್ಲಿ ಲಾರಿ ಮತ್ತು 2 ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಿಂದಾಗಿ ಕೆಲ ಸಮಯ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲಿ ಸೆರೆಯಾಗಿದ್ದು, ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.































































































error: Content is protected !!
Scroll to Top