ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರ ಪ್ರಶಸ್ತಿ

ಕಾರ್ಕಳ : ಜೆಸಿಐ ಭಾರತ ಕೊಡಮಾಡುವ ತರಬೇತಿ ವಿಭಾಗದ ರಾಷ್ಟ್ರ ಪ್ರಶಸ್ತಿಯನ್ನು ಜೆಸಿಐ ಬೆಳ್ಮಣ್ ಘಟಕ ಪಡೆದುಕೊಂಡಿದೆ. ಘಟಕವು ಈ ವರ್ಷದ ಅವಧಿಯಲ್ಲಿ ಜೆಸಿಐ ಬೆಳ್ಮಣ್ ಘಟಕವು ನೂರು ತರಬೇತಿಗಳನ್ನು ಪೂರ್ತಿ ಮಾಡಿದ್ದು, ಡಿ. 27ರಿಂದ 29ರವೆರೆಗ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ತರಬೇತಿ ವಿಭಾಗದ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದೆ. ಜೆಸಿಐ ಬೆಳ್ಮಣ್ ಘಟಕದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಇನ್ನಾ ಅವರು ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುಂಝೂನವಾಲ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಜೆಸಿಐ ವಲಯಾಧ್ಯಕ್ಷ ಅಭಿಲಾಶ್ ಬಿ. ಏ. ಮತ್ತು ಇತರ ವಲಯಾಧಿಕಾರಿಗಳು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು. ಜೆಸಿಐ ಬೆಳ್ಮಣ್ ಘಟಕವು ಇದುವರೆಗೆ ಪಡೆದ ಐದನೇ ಪ್ರಶಸ್ತಿ ಇದಾಗಿದೆ.































































































error: Content is protected !!
Scroll to Top