ರಾಜ್ಯದಲ್ಲಿ ಸಿಎಂ – ಡಿಸಿಎಂ ಕುರ್ಚಿ ಕಾದಾಟ : ಆಡಳಿತದಲ್ಲಿ ಕೇರಳ ಸಿಎಂ ಹಸ್ತಕ್ಷೇಪ – ಕಿಡಿಕಾರಿದ ಸುನಿಲ್‌ ಕುಮಾರ್‌

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕುರ್ಚಿ ಕಾದಾಟದಲ್ಲಿ ನಿರತರಾಗಿರುವಾಗ ಕೇರಳ ಮುಖ್ಯಮಂತ್ರಿ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರಂತದ ಸಂಗತಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೇರಳದ ಮಂತ್ರಿಗಳು, ಶಾಸಕರು ಬೆಂಗಳೂರು ಬಂದು ರಾಜಕೀಯ ಮಾಡುತ್ತಿರುವುದು ರಾಜ್ಯ ಸರಕಾರದ ವಿಫಲತೆಗೆ ಸಾಕ್ಷಿಯಾಗಿದೆ. ಕೇರಳದಲ್ಲಿ ಆನೆ ಸತ್ತಾಗ ಕರ್ನಾಟಕ ಸರಕಾರ 30 ಲಕ್ಷ ರೂ. ಘೋಷಿಸುತ್ತದೆ. ಕೇರಳದ ಚುನಾವಣೆ ಕಣ್ಮುಂದೆ ಇಟ್ಟುಕೊಂಡು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ರಾಜ್ಯ ಸರಕಾರವನ್ನು ಟೀಕೆ ಮಾಡುತ್ತಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೂಚನೆ ನೀಡುತ್ತಾರೆ. ರಾಜ್ಯ ಸರಕಾರ ಕೇರಳ ಸರಕಾರಕ್ಕೆ ತಲೆಬಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಸುನಿಲ್ ಕುಮಾರ್ ಕೇರಳ ಸರಕಾರಕ್ಕೆ ಸಿದ್ದರಾಮಯ್ಯ ಅವರು ಒಂದು ಎಚ್ಚರಿಕೆಯ ಸಂದೇಶ ನೀಡಬೇಕು. ಇದು ಕರ್ನಾಟಕದ ಜನರ ಅಪೇಕ್ಷೆ ಎಂದಿರುವ ಅವರು ರಾಜ್ಯದಲ್ಲಿ ಸರಕಾರ ನಡೆಸುತ್ತಿರುವುದು ಕನ್ನಡಿಗರೋ, ಕೇರಳಿಗರೋ ? ಎಂದು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.











































































error: Content is protected !!
Scroll to Top