ಡಿ.ಆರ್. ರಾಜು ಸ್ಮರಣಾರ್ಥ ಬಾರಾಡಿ ಕ್ರಾಸ್‌ನಲ್ಲಿ ನಿರ್ಮಾಣಗೊಂಡ ಚೆಕ್ ಪೋಸ್ಟ್ ಉದ್ಘಾಟನೆ

ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್‌ನಲ್ಲಿ ಪೊಲೀಸ್ ಇಲಾಖೆಯ ಉಪಯೋಗಕ್ಕಾಗಿ ನಿರ್ಮಿಸಲಾದ ತನಿಖಾ ಠಾಣೆ(ಚೆಕ್ ಪೋಸ್ಟ್)ಯನ್ನು ಡಿ.12ರಂದು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದಾ ಉದ್ಘಾಟಿಸಿದರು.

ಕಾರ್ಕಳ ರಶ್ವಿ ಕನ್ಸ್ಟ್ರಕ್ಷನ್ ಮಾಲಕ ವಿನಿಶ್ ಅವರು ತನ್ನ ಮಾವ ದಿವಂಗತ ಡಿ.ಆರ್. ರಾಜು ಅವರ ಸ್ಮರಣಾರ್ಥವಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ತನಿಖಾ ಠಾಣೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಸಮದ್‌ ಖಾನ್‌ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್‌ ಹಾಗೂ ಇತರ ಸಾರ್ವಜನಿಕರು ಸಹಕರಿಸಿದರು. ಈ ತನಿಖಾ ಠಾಣೆಯನ್ನು ಶುಕ್ರವಾರದಂದು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ವೇಳೆ ಇಲಾಖೆ ವತಿಯಿಂದ ವಿನಿಶ್‌, ರೋಟರಿ ಕ್ಲಬ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಮತ್ತು ರಾಜೇಶ್ ಕೋಟ್ಯಾನ್ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆರ್.‌, ಗ್ರಾಮಾಂತರ ಠಾಣಾ ಪೊಲೀಸ್‌ ಎಸ್‌ಐ ಪ್ರಸನ್ನ ಎಂ.ಎಸ್.‌, ನಗರ ಠಾಣಾ ಪೊಲೀಸ್‌ ಎಸ್‌ಐ ಮುರಳೀಧರ ನಾಯ್ಕ್, ರೋಟರಿ ಕ್ಲಬ್‌ ಕಾರ್ಯದರ್ಶಿ ಚೇತನ್‌ ನಾಯಕ್‌, ಸಮುದಾಯ ಸೇವಾ ಚೇರಮೆನ್‌ ವಸಂತ ಎಂ., ಸದಸ್ಯರಾದ ಬಾಲಕೃಷ್ಣ ದೇವಾಡಿಗ, ಅರುಣ್‌ ಮಾಂಜ, ಚೇತನ್‌ ಕುಮಾರ್‌, ಪೊಲೀಸ್‌ ಸಿಬ್ಬಂದಿ, ಪಂಚಾಯತ್‌ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.











































































error: Content is protected !!
Scroll to Top