ಡಿ. 18 : ಜ್ಞಾನಸುಧಾ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ – ಜಿ. ಎಲ್. ತ್ರಿಪುರಾಂತಕರವರಿಂದ ಉಪನ್ಯಾಸ

ಕಾರ್ಕಳ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ ಜರುಗುತ್ತಾ ಬರುತ್ತಿದೆ. ಮೌಲ್ಯಸುಧಾ ಮಾಲಿಕೆ-43 ಡಿ. 18ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಸುತ್ತೂರು ಜೆ.ಎಸ್.ಎಸ್. ಸಂಸ್ಥೆಗಳ ಸಂಯೋಜನಾಧಿಕಾರಿ, ಲೇಖಕರು ಹಾಗೂ ವಾಗ್ಮಿ ಜಿ. ಎಲ್. ತ್ರಿಪುರಾಂತಕರವರು ಆಗಮಿಸಲಿದ್ದು ‘ಆಕಾಂಕ್ಷೆಗಳು ಮತ್ತು ಕನಸುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top