ಕಾರ್ಕಳ : ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್‌ನವರು ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾಟದ ಕರ್ನಾಟಕ ವಾಲಿಬಾಲ್ ತಂಡಕ್ಕೆ ಬೆಂಗಳೂರಿನಲ್ಲಿ ನಡೆಸಿದ ಆಯ್ಕೆ ಶಿಬಿರದಲ್ಲಿ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರುಣ ಶೆಟ್ಟಿ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದ ಪಂದ್ಯಾಟವು ಡಿ.16 ರಿಂದ 21ರವರೆಗೆ ರಾಜಸ್ಥಾನದ ಜುಂಜುನು ಜಿಲ್ಲೆಯ ಪಿಲಾನಿಯಲ್ಲಿ ನಡೆಯಲಿದೆ. ವರುಣ ಜೋಡುರಸ್ತೆಯ ಕೊರಚೊಟ್ಟುವಿನ ಪ್ರಭಾಕರ ಶೆಟ್ಟಿ ಮತ್ತು ಶೋಭಾ ಶೆಟ್ಟಿ ದಂಪತಿ ಪುತ್ರಿ.
ವಾಲಿಬಾಲ್ – ಕ್ರೈಸ್ಟ್‌ಕಿಂಗ್‌ನ ವರುಣ ಶೆಟ್ಟಿ ರಾಷ್ಟ್ರ ಮಟ್ಟಕ್ಕೆ




















