ಭಾರತದ ಅಕ್ಕಿ ಆಮದಿನ ಮೇಲೆ ಅಮೆರಿಕಾ ವಕ್ರದೃಷ್ಟಿ : ಮತ್ತೊಂದು ಸುಂಕಾಸ್ತ್ರ ಎಚ್ಚರಿಕೆ ಕೊಟ್ಟ ಟ್ರಂಪ್..!

ವಾಷಿಂಗ್ಟನ್ : ಅಮೆರಿಕಾದ ಸಂಸ್ಥೆಗಳು ಭಾರತದತ್ತ ಮುಖ ಮಾಡುತ್ತಿದ್ದು, ಇದನ್ನು ದೂರ ಮಾಡಲು ಅಮೆರಿಕಾ ಅಧ್ಯಕ್ಷ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಭಾರತದ ಅಕ್ಕಿ ಅಮದಿನ ಮೇಲೆ ವಕ್ರದೃಷ್ಟಿ ಬೀರಿರುವ ಅವರು, ಭಾರತಕ್ಕೆ ಮತ್ತೊಂದು ತೆರಿಗೆಯ ಬೆದರಿಕೆ ಹಾಕಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ಅಸಮಾಧಾನಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಭಾರತದ ಕೃಷಿ ಆಮದಿನ ಮೇಲೆ ಅದರಲ್ಲೂ ವಿಶೇಷವಾಗಿ ಅಕ್ಕಿ ಆಮದಿನ ಮೇಲೆ ಹೊಸ ಸುಂಕಗಳನ್ನು ಪರಿಚಯಿಸುವ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಇತರ ಏಷ್ಯಾದ ಪೂರೈಕೆದಾರರಿಂದ ಕೃಷಿ ಆಮದಿನ ಬಗೆಗಿನ ತಮ್ಮ ಟೀಕೆಗಳನ್ನು ತೀವ್ರಗೊಳಿಸಿದ್ದಾರೆ. ಇನ್ನು ಮುಂದೆ ಭಾರತದ ತನ್ನ ಅಕ್ಕಿಯನ್ನು ಅಮೆರಿಕದಲ್ಲಿ ಸುರಿಯುವಂತಿಲ್ಲ. ಭಾರತದ ಅಕ್ಕಿ ಮತ್ತು ಕೆನಡಾದ ರಸಗೊಬ್ಬರಗಳ ಮೇಲೆ ಹೊಸ ಸುಂಕಗಳನ್ನು ಪರಿಚಯಿಸುವ ಬಗ್ಗೆ ನಾನು ಗಂಭೀರವಾಗಿ ಚಿಂತಿಸುತ್ತಿದ್ದೇನೆಂದು ಹೇಳಿದ್ದಾರೆ.



































































































error: Content is protected !!
Scroll to Top