ಹದೆಗೆಟ್ಟ ರಸ್ತೆ ದುರಸ್ತಿ ಪಡಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆಯಿಂದ ಪುರಸಭೆಗೆ ಮನವಿ

ಕಾರ್ಕಳ : ಮಾರ್ಕೆಟ್ ರಸ್ತೆ, ಕಲ್ಲೊಟ್ಟೆಯಿಂದ ತಾಲೂಕು ಆಫೀಸ್, ಕಲ್ಲೊಟ್ಟೆಯಿಂದ ಬಂಗ್ಲೆಗುಡ್ಡೆ, ಪತ್ತೊಂಜಿಕಟ್ಟೆಯಿಂದ ಗುಂಡ್ಯ, ಜಯಭಾರತಿಯಿಂದ ಕಾಬೆಟ್ಟು ದ್ವಾರ, ಆನೆಕೆರೆಯಿಂದ ಕುಂಟಲ್ಪಾಡಿ, ಬಂಗ್ಲೆಗುಡ್ಡೆಯಿಂದ ತಾಲೂಕು ಆಫೀಸ್‌ವರೆಗೆ ಹಾಗೂ ತೆಳ್ಳಾರು ರಸ್ತೆಯು ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದು ದುರಸ್ತಿಪಡಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆ-ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಕಾರ್ಕಳ ತಾಲೂಕು ಇವರು ಡಿ. 5ರಂದು ಪುರಸಭೆಗೆ ಮನವಿ ಸಲ್ಲಿಸಿದರು.

ಕಾರ್ಕಳ ಪುರಸಭೆ ವ್ಯಾಪ್ತಿಯ ರಸ್ತೆಗಳು ತುಂಬಾ ಹಾಳಾಗಿದ್ದು, ವಾಹನ ಸಂಚಾರ ಮಾತ್ರವಲ್ಲದೆ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ. ಸುಮಾರು ಒಂದು ವರ್ಷದಿಂದ ಈ ಸಮಸ್ಯೆಯಿದ್ದು, ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪುರಸಭಾ ವ್ಯಾಪ್ತಿಯ ರಸ್ತೆ ಹೊಂಡಗಳನ್ನು ಮುಚ್ಚಿ ಡಾಮರೀಕರಣಗೊಳಿಸಬೇಕಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪುರಸಭೆಯ ಮ್ಯಾನೇಜರ್‌ ಉದಯ್‌ ಕುಮಾರ್‌ ಅವರಿಗೆ ಮನವಿ ಹಸ್ತಾಂತರಿಸಿದರು. ಈ ಸಂದರ್ಭ ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಉಮ್ಮರಬ್ಬ, ಗೌರವಾಧ್ಯಕ್ಷ ರವಿ ಪೂಜಾರಿ, ಉಪಾಧ್ಯಕ್ಷರಾದ ಸದಸ್ಯ ಶೆಟ್ಟಿ, ಅಶೋಕ್, ಕಾರ್ಯದರ್ಶಿ ಪಸ್ಕಲ್‌, ಪ್ರವೀಣ್ ಬಸ್‌ಸ್ಟ್ಯಾಂಡ್, ಪ್ರಕಾಶ್ ಆನೆಕೆರೆ, ಮುಸ್ತಫ ಜೋಡುರಸ್ತೆ, ಪ್ರದೀಪ್ ಬಂಗ್ಲೆಗುಡ್ಡೆ, ಬೋಜ ಶೆಟ್ಟಿ, ಸುಧಾಕರ್ ಪೂಜಾರಿ, ಶೌಕತ್ ಆಲಿ, ಕೃಷ್ಣ ಕಾರ್ಕಳ, ಸಂದೀಪ್ ಆನೆಕೆರೆ, ಜಗ್ಗ ಬಸ್‌ಸ್ಟ್ಯಾಂಡ್, ಸುಧೀರ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.











































































error: Content is protected !!
Scroll to Top