ಕಾರ್ಕಳ : ಬ್ಯಾಡ್ಮಿಂಟನ್ ಆಟಗಾರ ಕಾರ್ಕಳದ ಆಯುಷ್ ಶೆಟ್ಟಿಗೆ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಿಂದ (FICCI) ಕೊಡಮಾಡುವ ಇಂಡಿಯ ಸ್ಪೋರ್ಟ್ಸ್ ಆವಾರ್ಡ್ 2025ರ ವರ್ಷದ ಉದಯೋನ್ಮುಖ ಕ್ರೀಡಾಪಟು (ಪುರುಷ) ಪ್ರಶಸ್ತಿ ಲಭಿಸಿದೆ. ನ. 21ರಂದು ದೆಹಲಿಯ FICCI ಫೆಡರೇಶನ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಆಯುಷ್ ಶೆಟ್ಟಿ ಸಾಣೂರಿನ ಮಿತ್ತಲ ಮನೆಯ ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿ ಪುತ್ರ. ತಮ್ಮ ಎಂಟನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ಆರಂಭದಲ್ಲಿ ಕಾರ್ಕಳ ಮತ್ತು ಮಂಗಳೂರಿನಲ್ಲಿ ತರಬೇತಿ ಪಡೆದಿದ್ದರು. ನಂತರ ಆಯುಷ್ ಶೆಟ್ಟಿ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಗಿದೆ.
ಯುಎಸ್ ಓಪನ್ BWF Super 300 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಆಯುಷ್ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2025 ರಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿ ಇದಾಗಿದೆ.





















