ಆಶೀರ್ವಾದ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿದ್ದ ನಕಲಿ ಸಾಧುವಿನ ಬಂಧನ

ಕಾರ್ಕಳ : ಆಶೀರ್ವಾದ ಮಾಡುವ ನೆಪದಲ್ಲಿ ಇಲೆಕ್ಟ್ರಾನಿಕ್ಸ್‌ ಅಂಗಡಿ ಮಾಲಕನ ಚಿನ್ನದ ಉಂಗುರ ಮತ್ತು ಹಣವನ್ನು ಎಗರಿಸಿದ್ದ ನಕಲಿ ಸಾಧುವನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.

ಮೇ 9ರಂದು ಅಜೆಕಾರಿನ ಶ್ರೀ ದುರ್ಗಾ ಎಂಟರ್‌ಪ್ರೈಸಸ್‌ ಎಲೆಕ್ಟ್ರಾನಿಕ್ಸ್‌ ಅಂಗಡಿಗೆ ಖಾವಿ ಧರಿಸಿದ ಇಬ್ಬರು ವ್ಯಕ್ತಿಗಳು ಆಗಮಿಸಿ, ಅಂಗಡಿಯ ಮಾಲಕ ರಂಜಿತ್‌ ಶೆಟ್ಟಿ ಅವರಿಗೆ ಆಶೀರ್ವಾದಿಸುತ್ತಾ ಅವರ ಗಮನ ಬೇರೆಡೆ ಸೆಳೆದು ಬೆರಳಿನಲ್ಲಿದ್ದ ಬಂಗಾರದ ಒಂದು ಉಂಗುರ ಹಾಗೂ ಕಿಸೆಯಲ್ಲಿದ್ದ 2 ಸಾ. ರೂ. ಹಣವನ್ನು ಕಳವು ಮಾಡಿರುತ್ತಾನೆ. ಈ ಬಗ್ಗೆ ರಂಜಿತ್‌ ಶೆಟ್ಟಿ ಮೇ 10 ರಂದು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಮುಖ್ಯ ಆರೋಪಿ ಮಧ್ಯಪ್ರದೇಶದ ಕಾರ್ಗೋನ್‌ ಜಿಲ್ಲೆಯ ಕರಣ್‌ನಾಥ್‌ನನ್ನು ವಶಕ್ಕೆ ಪಡೆದು ಕಳವಾಗಿರುವ 7 ಗ್ರಾಂ. ತೂಕದ ಚಿನ್ನದ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್‌ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಉಪವಿಭಾಗದ ಎಎಸ್‌ಪಿ ಡಾ. ಹರ್ಷಾಪ್ರಿಯಂವದಾ ಹಾಗೂ ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆರ್. ಅವರ ನೇತೃತ್ವದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಶ್ ಟಿ. ಎಂ. ತಂಡವು ಕಾರ್ಯಾಚರಣೆ ನಡೆಸಿತ್ತು. ಸಹಾಯಕ ಪೊಲೀಸ್ ಉಪನಿರೀಕ್ಷಕ ಲಕ್ಷ್ಮಣ್ ಪ್ರಭು, ಹೆಚ್.ಸಿ. ಸತೀಶ ಬೆಳ್ಳೆ ಅಶೋಕ ದೇವಾಡಿಗ ತೆಳ್ಳಾರ್, ಪ್ರದೀಪ ಶೆಟ್ಟಿ, ನಾಗೇಶ ಮಿಯ್ಯಾರು, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ದಿನೇಶ್ ಹಾಗೂ ನಿತಿನ್ ಸಹಕರಿಸಿರುತ್ತಾರೆ.









































































































error: Content is protected !!
Scroll to Top