ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ದಿನೇಶ್‌ ಅಮ್ಮಣ್ಣಾಯ ಅಸ್ತಂಗತ

ಮಂಗಳೂರು : ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ದಿನೇಶ್ ಅಮ್ಮಣ್ಣಾಯ (65) ಅವರು ಅ. 16ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನಕ್ಕೆ ಕಾಲಿಟ್ಟ ದಿನೇಶ್ ಅಮ್ಮಣ್ಣಾಯ ಅವರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಪ್ರಾರಂಭದಲ್ಲಿ ಪುತ್ತೂರು ಮೇಳದಲ್ಲಿ ಚೆಂಡೆ, ಮದ್ದಲೆ ವಾದಕರಾಗಿ ಸೇರಿದ ದಿನೇಶ್ ಅಮ್ಮಣ್ಣಾಯ ಅವರು ಬಳಿಕ ಅದೇ ಮೇಳದಲ್ಲಿ ಭಾಗವತರಾಗಿ ಮಿಂಚಿದರು. ಕಾಡಮಲ್ಲಿಗೆ, ಕಚ್ಚೂರಮಾಲ್ದಿ, ಪಟ್ಟದಪದ್ಮಲೆ, ನಳದಮಯಂತಿ, ಸತ್ಯ ಹರಿಶ್ಚಂದ್ರ ಪ್ರಸಂಗಗಳು ಅಮ್ಮಣ್ಣಾಯರ ಭಾಗವತಿಕೆಯನ್ನು ಪ್ರಸಿದ್ಧಗೊಳಿಸಿತು. ರಸಪೋಷಣೆಯಲ್ಲಿ ಅದ್ವಿತೀಯ ಭಾಗವತರಾಗಿದ್ದ ಅವರು ತೆಂಕು ಹಾಗೂ ಬಡಗುತಿಟ್ಟು ಪ್ರಕಾರಗಳೆರಡರಲ್ಲೂ ಗುರುತಿಸಿಕೊಂಡಿದ್ದರು. ಕರ್ನಾಟಕ ಮೇಳ, ಎಡನೀರು ಮೇಳದಲ್ಲೂ ಕಲಾವಿದರಾಗಿದ್ದ ಅವರು ಅರಸಿನಮಕ್ಕಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು.









































































































error: Content is protected !!
Scroll to Top