ರಾಜ್ಯದ 12 ಮಂದಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ 12 ಮಂದಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಮಿತಿ ಮೀರಿದ ಆಸ್ತಿ ಸಂಗ್ರಹಣೆ ಆರೋಪದಡಿ ರಾಜ್ಯಾದ್ಯಂತ 12 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಲ್ಲೆಲ್ಲಿ ದಾಳಿ:
ಹಾಸನ – ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕಿ – ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆ
ಕಲಬುರಗಿ – ಧೂಳಪ್ಪ, ಸಹಾಯಕ‌ ನಿರ್ದೇಶಕ – ಕೃಷಿ ಇಲಾಖೆ
ಚಿತ್ರದುರ್ಗ – ಚಂದ್ರಕುಮಾರ್, ಸಹಾಯಕ ನಿರ್ದೇಶಕ – ಕೃಷಿ ಇಲಾಖೆ
ಉಡುಪಿ – ಲಕ್ಷ್ಮೀನಾರಾಯಣ್ ಪಿ ನಾಯಕ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ
ಬೆಂಗಳೂರು – ಮಂಜುನಾಥ್ ಜಿ, ವೈದ್ಯಾಧಿಕಾರಿ – ಮಲ್ಲಸಂದ್ರ ಹೆರಿಗೆ ಆಸ್ಪತ್ರೆ
ಬೆಂಗಳೂರು – ವಿ ಸುಮಂಗಲ, ನಿರ್ದೇಶಕಿ – ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ
ಬೆಂಗಳೂರು – ಎನ್.ಕೆ ಗಂಗಮರಿ ಗೌಡ, ಸರ್ವೇಯರ್ – ವಿಶೇಷ ಭೂ ಸ್ವಾಧೀನ ಅಧಿಕಾರಿ – ಬಿಎಂಆರ್‌ಸಿಎಲ್
ದಾವಣಗೆರೆ – ಜಗದೀಶ್ ನಾಯಕ್, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ – ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ
ದಾವಣಗೆರೆ – ಬಿ.ಎಸ್ ನಡುವಿನಮನಿ, ಜ್ಯೂನಿಯರ್ ಇಂಜಿನಿಯರ್ – ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಹಾವೇರಿ – ಅಶೋಕ್, ರೆವಿನ್ಯೂ ಇನ್ಸ್‌ಪೆಕ್ಟರ್ – ರಾಣೆಬೆನ್ನೂರು ತಾಲ್ಲೂಕು
ಹಾವೇರಿ – ಬಸವೇಶ್, ಇನ್‌ಚಾರ್ಜ್ ಎಕ್ಸಿಕ್ಯುಟಿವ್ ಆಫೀಸರ್ – ತಾಲ್ಲೂಕು ಪಂಚಾಯತ್ ಸವಣೂರು
ಬಾಗಲಕೋಟೆ – ಚೇತನ್, ಜ್ಯೂನಿಯರ್ ಇಂಜಿನಿಯರ್ – ಅಸಿಸ್ಟೆಂಟ್ ಇಂಜಿನಿಯರ್ (ಆಲಮಟ್ಟಿ ಬಲದಂಡೆ ಕಾಲುವೆ)

ಇವರಿಗೆ ಸಂಬಂಧಿಸಿದ‌ ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.









































































































error: Content is protected !!
Scroll to Top