ಸಿಎ ನಿತ್ಯಾನಂದ ಪ್ರಭು ಅವರಿಗೆ ಮಾತೃವಿಯೋಗ

ಕಾರ್ಕಳ : ಖ್ಯಾತ ಸಿಎ ನಿತ್ಯಾನಂದ ಪ್ರಭು ಅವರ ತಾಯಿ ಸುಮಿತ್ರಾ ಪ್ರಭು (87) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಅ. 12ರಂದು ನಿಧನ ಹೊಂದಿದರು. ಸುಮಿತ್ರಾ ಪ್ರಭು ಅವರು ಅಜೆಕಾರಿನಲ್ಲಿ ತನ್ನ ಪತಿ ಗುಂಡುರಾಯ ಪ್ರಭು ಅವರೊಂದಿಗೆ 40 ವರ್ಷಗಳ ಕಾಲ ಅಂಗಡಿ ವ್ಯವಹಾರ ನಡೆಸುತ್ತಿದ್ದರು. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಶ್ರದ್ಧಾಂಜಲಿ
ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಟ್ರಸ್ಟಿಯಾಗಿರುವ ಸಿಎ ನಿತ್ಯಾನಂದ ಪ್ರಭು ಅವರ ತಾಯಿ ನಿಧನಕ್ಕೆ ಕಾರ್ಕಳ ಜ್ಞಾನಸುಧಾ ಕಾಲೇಜು ಆವರಣದಲ್ಲಿ ಸೋಮವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಸಿಇಒ ದಿನೇಶ್‌ ಕೊಡವೂರು, ಉಪಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್‌ ಯು., ಉದ್ಯಮಿ ತ್ರಿವಿಕ್ರಮ ಕಿಣಿ, ಸುಮಿತ್ರಾ ಅವರ ಮೊಮ್ಮಗ ಸಿಎ ವಿಘ್ನೇಶ್‌ ಕಾಮತ್‌ ಅವರು ಸುಮಿತ್ರಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇಂಗ್ಲೀಷ್‌ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್‌ ಬೋಳ ಅವರು ನುಡಿನಮನ ಸಲ್ಲಿಸಿದರು.

ಡಾ. ಸುಧಾಕರ್‌ ಶೆಟ್ಟಿ ಅವರು ಸುಮಿತ್ರಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು








































































































error: Content is protected !!
Scroll to Top