ಬಸ್‌ ಮಾಹಿತಿಗಾಗಿ ಕ್ಯೂ ಆರ್‌ ಕೋಡ್‌ – ಜೇಸಿಐ ಕಾರ್ಕಳ ರೂರಲ್‌ ವಿನೂತನ ಯೋಜನೆ

ಕಾರ್ಕಳ : ಕಾರ್ಕಳದಿಂದ ಹೊರಡುವ ಬಸ್‌ಗಳ ಟೈಮಿಂಗ್ಸ್‌, ರೂಟ್‌, ಪ್ರವಾಸಿ ತಾಣ, ಸಂಪರ್ಕ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಹೊಂದಿರುವ ಕ್ಯೂ ಆರ್‌ ಕೋಡ್‌ ಜೊತೆಗೆ ವೆಬ್‌ಸೈಟ್ ಅನ್ನು ಜೇಸಿಐ ಕಾರ್ಕಳ ರೂರಲ್‌ ಅಭಿವೃದ್ಧಿಪಡಿಸಿದ್ದು ಅ. 8ರಂದು ಸಾರ್ವಜನಿಕರಿಗೆ ಅನಾವರಣಗೊಳಿಸಿದೆ. ಜೆಸಿಐ ವಲಯ15 ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ.‌ ಅವರು ಕಾರ್ಕಳ ಬಸ್‌ ನಿಲ್ದಾಣದಲ್ಲಿ ಕ್ಯೂ ಆರ್‌ ಸ್ಕ್ಯಾನ್‌ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಾರ್ಕಳದಿಂದ ಯಾವ್ಯಾವ ಊರಿಗೆ ಯಾವ ಸಮಯಕ್ಕೆ ಯಾವ ಬಸ್‌ ಇದೆ ಎನ್ನುವ ಸಮಗ್ರ ಮಾಹಿತಿಯನ್ನು ಅಂಗೈಯಲ್ಲಿರುವ ಮೊಬೈಲ್‌ನಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಪಡೆಯಬಹುದಾಗಿದೆ. ಬಸ್ ಮಾಹಿತಿ ಜೊತೆಗೆ ಕಾರ್ಕಳದ ಪ್ರವಾಸಿ ತಾಣಗಳು, ಲಾಡ್ಜ್ ರೆಸ್ಟೋರೆಂಟ್ ಗಳು, ಆಸ್ಪತ್ರೆ, ತುರ್ತು ದೂರವಾಣಿ ಸಂಖ್ಯೆಗಳ ಮಾಹಿತಿಯೂ ಇದರಲ್ಲಿದೆ. ಜೇಸಿಐ ಕಾರ್ಕಳ ರೂರಲ್‌ ವತಿಯಂದ ಅಭಿವೃದ್ಧಿಪಡಿಸಲಾದ ಈ ವಿನೂತನ ಯೋಜನೆಯಿಂದ ಬಸ್‌ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.
ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ, ವಲಯಾಧಿಕಾರಿ ಮಂಜುನಾಥ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಸಂತೋಷ್ ಬಂಗೇರ, ಕಾರ್ಯದರ್ಶಿ ಚಿನ್ಮಯಿ ಶೆಣೈ, ಸ್ಥಾಪಕರಾದ ಸತೀಶ್ ಪೂಜಾರಿ ಕಲತ್ರಪಾದೆ, ಪೂರ್ವಧ್ಯಕ್ಷರಾದ ಶೋಭಾ ಭಾಸ್ಕರ್, ಮೋಹನ್ ನಕ್ರೆ, ವೀಣಾ ರಾಜೇಶ್, ಮಾರ್ಗದರ್ಶಕ ಪ್ರಕಾಶ್ ಕೆ.ಪಿ., ಬಸ್‌ ಏಜೆಂಟ್‌ ಬಳಗ ಅಧ್ಯಕ್ಷ ಸುರೇಶ್‌ ದೇವಾಡಿಗ, ಲೇಡಿ ಜೇಸಿ ಕೋರ್ಡಿನೇಟರ್ ಸಂಗೀತಾ ರತ್ನಾಕರ್, ಜೂನಿಯರ್ ಜೇಸಿ ಚೇರ್ ಪರ್ಸನ್ ದಿಯಾ ರಾಜೇಶ್ ಭಂಡಾರಿ ಉಪಸ್ಥಿತರಿದ್ದರು.

ಬಳಿಕ ಹೊಟೇಲ್‌ ಸ್ವಾಗತ್‌ನಲ್ಲಿ ನಡೆದ ಜೇಸಿಐ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪವರ್ ಮ್ಯಾನ್ ದಯಾನಂದ ದೇವಾಡಿಗ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರಾದ ಪೂರ್ಣಿಮಾ ಶೆಣೈ ಶಾಲು ಹೊದಿಸಿ ಗೌರವಿಸಿದರು. ಇದೇ ವೇಳೆ ತೆಳ್ಳಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ಶುದ್ಧೀಕರಣ ಯಂತ್ರ ನೀಡಲಾಯಿತು.















































































error: Content is protected !!
Scroll to Top