ಕಾರ್ಕಳ : ಬೋಳ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಕೊಳಲ ಬಾಕ್ಯಾರಿನಲ್ಲಿ ಗರಡಿ ಮನೆ ಹರೀಶ್ ಪೂಜಾರಿ ಅವರ ಸಂಚಾಲಕತ್ವದಲ್ಲಿ ಅ.12ರ ರವಿವಾರ ತಾಲೂಕು ಮಟ್ಟದ ಹಗ್ಗ ಜಗ್ಗಾಟ ಹಾಗೂ ಸ್ಥಳೀಯರ ಮನೋರಂಜನಾ ಕ್ರೀಡೋತ್ಸವ ಜರಗಲಿದೆ.
ಪುರುಷರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಬೈದಶ್ರೀ ಟ್ರೋಫಿ-2025 ಹಾಗೂ ನಗದು ಬಹುಮಾನ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ ಬೈದಶ್ರೀ ಟ್ರೋಫಿ – 2025 ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಸ್ಥಳೀಯರ ಕ್ರೀಡೋತ್ಸವದಲ್ಲಿ ಚಿಕ್ಕ ಮಕ್ಕಳಿಂದ ಆದಿಯಾಗಿ ಹಿರಿಯರ ತನಕ ವಿವಿಧ ರೀತಿಯ ಮನೋರಂಜನಾ ಸ್ಪರ್ಧೆಗಳು ನಡೆಯಲಿದ್ದು ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಬಂದು ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘದ ಅಧ್ಯಕ್ಷ ಸಂದೀಪ್ ಬಿ. ಮತ್ತು ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








