ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಸ್ತಿತ್ವಕ್ಕೆ

ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ – ಕಾರ್ಯದರ್ಶಿ ದೀಪಾ ಭಂಡಾರಿ

ಹೆಬ್ರಿ : ಕಾರ್ಕಳ ಮಾಜಿ ಶಾಸಕರಾಗಿದ್ದ ದಿ. ಹೆಬ್ರಿ ಗೋಪಾಲ ಭಂಡಾರಿಯವರ ಹೆಸರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ದೀಪಾ ಭಂಡಾರಿ ಚಾರ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕೋಶಾಧಿಕಾರಿಯಾಗಿ ಎಚ್.‌ ಜನಾರ್ಧನ್‌ ಹೆಬ್ರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ ಭಂಡಾರಿ ಹುತ್ತುರ್ಕೆ ಚಾರ, ವಾದಿರಾಜ ಶೆಟ್ಟಿ ಚಾರ, ನವೀನ್‌ ಕೆ. ಅಡ್ಯಂತಾಯ, ಪತ್ರಕರ್ತ ಸುಕುಮಾರ್‌ ಮುನಿಯಾಲ್‌, ಗೋಪಿನಾಥ ಭಟ್ ಮುನಿಯಾಲು, ಮೋಹನದಾಸ ನಾಯಕ್‌‌ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್‌ ಶಿವಪುರ, ಬೈಕಾಡಿ ಮಂಜುನಾಥ ರಾವ್‌ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್‌ ಟೆಲ್ಲಿಸ್‌ ಅಜೆಕಾರು, ರಾಘವೇಂದ್ರ ನಾಯ್ಕ್‌ ಅವರನ್ನು ಆಯ್ಕೆ ಮಾಡಲಾಗಿದೆ.
ಸೇವಾ ಟ್ರಸ್ಟ್‌ನ ಪ್ರಥಮ ಸಭೆಯು ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋಪಾಲ ಭಂಡಾರಿಯವರ ಮನೆಯಲ್ಲಿ ನಡೆಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗೋಪಾಲ ಭಂಡಾರಿಯವರ ಪತ್ನಿ ಪ್ರಕಾಶಿನಿ ಭಂಡಾರಿ, ರಾಜೇಶ ಭಂಡಾರಿ, ಶ್ವೇತ ಕುಮಾರ್‌ ಉಪಸ್ಥಿತರಿದ್ದರು.





































error: Content is protected !!
Scroll to Top