ಅಧ್ಯಕ್ಷರಾಗಿ ಉಷಾ ಎಸ್. ಕುಲಾಲ್ – ಕಾರ್ಯದರ್ಶಿಯಾಗಿ ಚಂದ್ರಾವತಿ ಇನ್ನಾ ಆಯ್ಕೆ
ಕಾರ್ಕಳ : ಕುಂಭನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಬೆಳ್ಮಣ್ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಮುಂಡ್ಕೂರಿನ ಉಷಾ ಎಸ್. ಕುಲಾಲ್ ಹಾಗೂ ಕಾರ್ಯದರ್ಶಿಯಾಗಿ ಚಂದ್ರಾವತಿ ಇನ್ನಾ ಅವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಪವಿತ್ರ ಕೋಡಿಮಾರ್, ಕೋಶಾಧಿಕಾರಿಯಾಗಿ ಶಶಿಕಲಾ ಜಂತ್ರ, ಸದಸ್ಯರಾಗಿ ಗಿರೀಶ್ ಮೂಲ್ಯ ಸಂಕಲಕರಿಯ, ಸುಧಾಕರ್ ಮೂಲ್ಯ ಇನ್ನಾ, ಆಶಾ ಕೋಡಿಮಾರ್, ಹರೀಶ್ ಕಾಂತಾವರ, ಪ್ರೇಮ ಬೋಳ, ಆಶಾ ಮುಂಡ್ಕೂರು, ಚೈತ್ರ ಇನ್ನಾ, ಚಂದ್ರಕಲಾ ಕೆದಿಂಜೆ, ಅಮಿತ ಸಚ್ಚೆರಿಪೇಟೆ ಮತ್ತು ವನಿತಾ ಜಂತ್ರ ಅವರು ಆಯ್ಕೆಯಾಗಿರುತ್ತಾರೆ.








