ದನದ ಮೃತದೇಹ ಪತ್ತೆ – ಪ್ರಕರಣ ದಾಖಲು

ಕಾರ್ಕಳ : ಕಾಂತಾವರ ಗ್ರಾಮದ ಇರ್ವತ್ತೂರು – ಚಿಲಿಂಬಿ ಸಾರ್ವಜನಿಕ ರಸ್ತೆ ಬದಿ ನಸು ಕಂದು ಬಣ್ಣದ ದನದ ಮೃತದೇಹವೊಂದು ಸೆ.30ರ ಬೆಳಗ್ಗೆ ಪತ್ತೆಯಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಸಿಬ್ಬಂದಿ ಸ್ಥಳೀಯರನ್ನು ವಿಚಾರಿಸಿದಾಗ ದನದ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದು, ಯಾರೋ ಅಪರಿಚಿತರು ಈ ದನವನ್ನು ಎಲ್ಲಿಂದಲೋ ಕಳವು ಮಾಡಿ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವಾಗ ಉಸಿರುಗಟ್ಟಿ ಮೃತಪಟ್ಟಿರುವುದನ್ನು ಕಂಡು ರಸ್ತೆ ಬದಿ ಎಸೆದು ಹೋಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



















error: Content is protected !!
Scroll to Top