ಸೆ. 14 : ಜ್ಞಾನಸುಧಾದಲ್ಲಿ ಮೌಲ್ಯಸುಧಾ-40 : ಸಕಾರಾತ್ಮಕ ಆಲೋಚನೆ ಸಾಧನೆಗೆ ಪ್ರೇರಣೆ

ಕಾರ್ಕಳ : ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುವ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-40 ಸೆ. 14ರಂದು ಸಂಜೆ 6.15ಕ್ಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಚಿಕ್ಕೋಡಿ ಸದಲಗ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಖ್ಯಾತ ವಾಗ್ಮಿ ವೀರೇಶ್‌ ಗದಿಗೆಪ್ಪಗೌಡ ಪಾಟೀಲ್ ಭಾಗವಹಿಸಲಿದ್ದು, ʼಸಕಾರಾತ್ಮಕ ಆಲೋಚನೆ ಸಾಧನೆಗೆ ಪ್ರೇರಣೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.















































































error: Content is protected !!
Scroll to Top