ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಹಾಗೂ ವನಮಹೋತ್ಸವ

ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು – ಮುಂಬೈ ವತಿಯಿಂದ ಆ. 15 ರಂದು ಸ್ವಾತಂತ್ರ್ಯೋತ್ಸವ ಹಾಗೂ ವನಮಹೋತ್ಸವ ನಡೆಸಲಾಯಿತು. ಕುಕ್ಕುಂದೂರು ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಧ್ವಜಾರೋಹಣದಲ್ಲಿ ಪಾಲ್ಗೊಂಡ ಬಳಿಕ ಮೆರವಣಿಗೆ ನಡೆಸಲಾಯಿತು. ಪ್ರತಿವರುಷದಂತೆ ಟಪ್ಪಾಲುಕಟ್ಟೆ ಪರಿಸರದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಂಚಾಲಕ ರಾಜೇಂದ್ರ ಕುಮಾರ್ ಬಲ್ಲಾಳ್, ಮುಖ್ಯ ಶಿಕ್ಷಕಿ ಸುಜಾತಾ ಎನ್. ರಾಜ್, ಸ್ಥಳೀಯ ಉದ್ಯಮಿ ಕಮಲಾಕ್ಷ ನಾಯಕ್ ಶಾಂತೇರಿ ಕಾಮಾಕ್ಷಿ, ಕುಕ್ಕುಂದೂರು ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀನಿವಾಸ ಕಿಣಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.











































error: Content is protected !!
Scroll to Top