ಸಂಪರ್ಕ ರಸ್ತೆ ನಾಶ – ಸರಕಾರದಿಂದ ಮಂಜೂರುಗೊಂಡ ಜಾಗದ ಬಳಕೆಗೆ ಅಡ್ಡಿ – ಜೀವ ಬೆದರಿಕೆ : ಪ್ರಕರಣ ದಾಖಲು

ಹೆಬ್ರಿ : ಸಂಪರ್ಕ ರಸ್ತೆಯನ್ನು ನಾಶ ಮಾಡಿ ಸರಕಾರದಿಂದ ಮಂಜೂರಾದ ಮತ್ತು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಜಾಗವನ್ನು ಉಪಯೋಗಿಸಿದಂತೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಿ ಎಂಬವರು ಶಿವಪುರ ಗ್ರಾಮದ ದೋರಿಯಲು ಎಂಬಲ್ಲಿಯ ಸರ್ವೆ ನಂಬರ-293/5ಪಿ1 ರಲ್ಲಿ 0.05 ಎಕರೆ ಸರಕಾರಿ ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿದ್ದು, ಈ ಜಾಗವು ಅವರಿಗೆ ನಿವೇಶನ ಹಕ್ಕಿನಡಿ ಮಂಜೂರಾಗಿರುತ್ತದೆ. ಈ ಜಾಗಕ್ಕೆ ಹೊಂದಿಕೊಂಡಿರುವ ಅಂದಾಜು 02.50 ಎಕ್ರೆ ಸರಕಾರಿ ಜಾಗ ಸಹ ಅವರ ಸ್ವಾದೀನತೆಯಲ್ಲಿ ಇರುತ್ತದೆ ಹಾಗೂ ಇದರ ಮಂಜೂರಾತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಪಕ್ಕದ ಜಾಗದವರಾದ ಸುರೇಂದ್ರ ಎಂಬವರು ಹೊನ್ನಿ ಅವರ ಜಾಗಕ್ಕೆ ಸಂಪರ್ಕಿಸುವ ರಸ್ತೆ ನಾಶ ಮಾಡಿ ಅಗೆದು ಹಾಕಿ, ಮರ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದ ಹೊನ್ನಿ ಅವರಿಗೆ 50 ಸಾ. ರೂ. ನಷ್ಟ ಸಂಭವಿಸಿದೆ. ಈ ಬಗ್ಗೆ ಸುರೇಂದ್ರ ಅವರಲ್ಲಿ ಹೊನ್ನಿ ಅವರು ಕೇಳಿದಾಗ ಜಾಗ ಬಿಟ್ಟು ಹೋಗಬೇಕು ಎಂದು ಬೆದರಿಸಿರುತ್ತಾರೆ ಅಲ್ಲದೆ ಆ. 11ರಂದು ಸುರೇಂದ್ರ ಅವರು ಹೊನ್ನಿ ಅವರ ಜಾಗದ ಸಂಪರ್ಕ ರಸ್ತೆ ಸೇರಿಸಿಕೊಂಡು ತಂತಿ ಬೇಲಿ ಹಾಕಿದ್ದಾರೆ ಈ ವೇಳೆ ಪ್ರಶ್ನಿಸಿದ ಹೊನ್ನಿ ಮತ್ತವರ ಮಕ್ಕಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೊನ್ನಿ ಅವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top